ದೇವದಾಸಿ ಮಹಿಳೆಯರ ಹಕ್ಕೋತ್ತಾಯಕ್ಕೆ ಪ್ರತಿಭಟನೆ

ರಾಯಚೂರು.ಅ.12- ರಾಜ್ಯದ ದೇವದಾಸಿ ಮಹಿಳೆಯರ ಹಕ್ಕೋತ್ತಾಯ ಪರಿಹರಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿತು.
ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಯೂರಿರುವ ದೇವದಾಸಿ ಮಹಿಳೆಯರಿಗೆ ಕನಿಷ್ಟ 5 ಎಕರೆ ಜಮೀನು ಮಂಜೂರಿಯೊಂದಿಗೇ ಭೂಹೀನ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ಭೂಮಿ ನೀಡಲು ಗಣತಿ ಕಾರ್ಯ ಕೈಗೊಳ್ಳುಬೇಕು. ಪ್ರತಿಯೊಬ್ಬ ದೇವದಾಸಿಯರು, ಬಡ ರೈತ ಕೂಲಿ ಕಾರ್ಮಿಕರಿಗೆ 5 ಲಕ್ಷ ಮೌಲ್ಯದ ಮನೆ ನಿರ್ಮಾಣ ಮಾಡಿ, ಇಲಾಖೆಯ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು.
ನಗರ ವ್ಯಾಪ್ತಿಯ ಸರ್ಕಾರಿ, ಗೋಮಾಳ ಜಮೀನು ಸಾಗುವಳಿಯಲ್ಲಿ ತೊಡಗಿರುವ ಬಡವರನ್ನು ಒಕ್ಕಲೆಬ್ಬಿಸದೇ ಅರ್ಹರಿಗೆ ಸಾಗುವಳಿ ಪತ್ರ ನೀಡಬೇಕು. ಕೃಷಿಯೇತರರು ಭೂಮಿ ಹೊಂದುವ ಮಿತಿ ಶಾಸನ ತಿದ್ದುಪಡಿಯನ್ನು ಹಿಂಪಡೆದು ಇನ್ನಿತರ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾ ನಿರತರಾಗಿ ಆಗ್ರಹಿಸಲಾಯಿತು.
ಮಹಿಳಾ ಸಂಘ ಗೌರವಾಧ್ಯಕ್ಷರಾದ ಕೆ.ಜಿ.ವೀರೇಶ, ಕರಿಯಪ್ಪ ಅಚ್ಚೊಳ್ಳಿ, ಶರಣಬಸವ ಇನ್ನಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Leave a Comment