ದೂರಿಗೆ ಕಠಿಣ ಕ್ರಮ-ದೇಶಪಾಂಡೆ

ರಾಮದುರ್ಗ, ಮೇ 19- ರಾಜ್ಯದಲ್ಲಿನ ಭೀಕರ ಬರ ಎದುರಿಸಲು ಸರ್ಕಾರದಲ್ಲಿ ಹಣಕಾಸಿನ ಕೊರತೆ ಇಲ್ಲ.  ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದೂರು ಬಂದರೆ ಕಠಿಣ ಕ್ರಮ ಅನಿವಾರ್ಯ ಎಂದು ಕಂದಾಯ ಸಚಿವ ಆರ್. ವ್ಹಿ. ದೇಶಪಾಂಡೆ ಹೇಳಿದರು.
ತಾಲೂಕಿನ ಕೆ. ಚಂದರಗಿಯಲ್ಲಿ ತಾಲೂಕಾ ಆಡಳಿತ ಶುಕ್ರವಾರವಷ್ಟೇ ಆರಂಭಿಸಿರುವ ರಿಯಾಯತಿ ದರದ ಮೇವು (ಬ್ಯಾಂಕ್) ವಿತರಣಾ ಕೇಂದ್ರಕ್ಕೆ ಭೇಟಿ ಪರಿಶೀಲನೆಯ ನಂತರ ಮಾತನಾಡಿದ ಅವರು, ಪ್ರತಿ ಜಾನುವಾರಗೆ ಪ್ರತಿದಿನ ರೂ.2ಕ್ಕೆ ಒಂದು ಕೆಜಿಯಂತೆ ಐದು ಕೆ.ಜಿ ಮೇವು ನೀಡಲಾಗುವುದು ಎಂದು ಹೇಳಿದ ಕಂದಾಯ ಸಚಿವರು ಜಾನುವಾರಗಳಿಗೆ ಮೇವು ನೀರು ನೀಡುವುದರ ಜೊತೆಯಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಉದ್ಯೋಗ ನೀಡಲಾಗುವುದು ಎಂದು ಹೇಳಿ ಅಧಿಕಾರಿಗಳು ಜನರಿಗೆ ಸರಿಯಾಗಿ  ಉದ್ಯೋಗ ನೀಡಿ ಉದ್ಯೋಗ ಅರಿಸಿ ಗುಳೆ ಹೋಗುವುದನ್ನು ತಪ್ಪಿಸಬೇಕೆಂದರು.
ಇದೇ ಸಂದರ್ಭದಲ್ಲಿ ಚಂದರಗಿ ಗ್ರಾಮಸ್ಥರು ಕಳೆದ ಭಾರಿ ಬರ ಅಧ್ಯಯನಕ್ಕೆ ಆಗಮಿಸಿದ ವೇಳೆ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಹಣವನ್ನು ಇದುವರೆಗೆ ನೀಡಿಲ್ಲ ಎಂದು ದೂರಿದಾಗ ಕೇಂದ್ರ ಸರ್ಕಾರ ಶೇ.80 ರಷ್ಟು ತನ್ನ ಪಾಲಿನ ನರೇಗಾ ಅನುದಾನ ನೀಡದ ಪರಿಣಾಮ ಕೂಲಿ ನೀಡಲು ಸಾಧ್ಯವಾಗಿಲ್ಲ ಕೇಂದ್ರ ಸರ್ಕಾರ ಅನುದಾನ ನೀಡದಿದ್ದರು ಸಹಿತ ರಾಜ್ಯ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ ಬೇಂಗಳೂರಿಗೆ ತೆರಳಿದ ನಂತರ ಶೀಘ್ರದಲ್ಲಿ ಬಾಕಿ ಉಳಿದಿರುವ ಹಣವನ್ನು ನೀಡಲು ವ್ಯವಸ್ಥೆ ಮಾಡುವುದಾಗಿ ಸಚಿವ ಆರ್. ವ್ಹಿ. ದೇಶಪಾಂಡೆ ಹೇಳಿದರು.
ಇದೇ ಸಂದರ್ಭದಲ್ಲಿ ಸುಮಾರು 2500 ಜನಸಂಖ್ಯೆ ಹೊಂದಿರುವ ಕೆ. ಚಂದರಗಿ ಗ್ರಾಮಕ್ಕೆ ಪ್ರತಿ ದಿನ 8 ನೀರಿನ ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ ಹೇಳಿದ ಸಂದರ್ಭದಲ್ಲಿ ಅಷ್ಟು ಜನಸಂಖ್ಯೆಗೆ ನೀವು ಪೂರೈಕೆ ಮಾಡುವ ನೀರು ಸಾಕಾಗುವುದಿಲ್ಲ ಸರ್ಕಾರದ ಹಣದಲ್ಲಿ ಜನರಿಗೆ ಸರಿಯಾಗಿ ಸೇವೆ ನೀಡಬೇಕು ಇನ್ನು ಹೆಚ್ಚಿನ ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ನೀವೇನು ಇಮ್ಮ ಜೇಬಿನಿಂದ ಹಣ ಖರ್ಚು ಮಾಡುವುದಿಲ್ಲ ನಿಮ್ಮನ್ನು ವರ್ಗಾವಣೆ ಮಾಡಿದಾಗ ಜನರು ಬಂದು ಒಳ್ಳೇಯ ಅಧಿಕಾರಿ ವರ್ಗಾವಣೆ ರದ್ದು ಮಾಡಿ ಎಂದು ಹೇಳುವಂತೆ ಕೆಲಸ ಮಾಡಬೇಕೆಂದು ತಹಶೀಲ್ದಾರ ಬಸನಗೌಡ ಕೋಟೂರ ಅವರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟರÀಲ್ಲಿ ಜಿಲ್ಲಾಧಿಕಾರಿ ಆರ್. ವಿಶಾಲ್ ಮಧ್ಯ ಪ್ರವೇಶಿಸಿ ನಾಳೆಯಿಂದ 16 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ. ಚಂದರಗಿ ಗ್ರಾಮಸ್ಥರು ಕುಡಿಯುವ ನೀರು ಪೂರೈಕೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆಹಾನಿ ಹಾಗೂ ಬೆಳೆವಿಮಾ ಯೋಜನೆಯ ಹಣ ರೈತರ ಖಾತೆಗೆ ಜಮಾ ಮಾಡಲು ಒತ್ತಾಯಿಸಿದರು.
ಸಚಿವರೊಂದಿಗೆ ಬೈಲಹೊಂಗಲದ ಉಪವಿಭಾಗಾಧಿಕಾರಿ ಎಂ. ಪಿ. ಮಾರುತಿ, ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಹಕಾಟಿ, ತಹಶೀಲ್ದಾರ ಬಸನಗೌಡ ಕೋಟೂರ, ಸಹಾಯಕ ಕೃಷಿ ನಿರ್ದೇಶಕ ಆರ್. ಡಿ. ಬಳೂಟಗಿ ಸೇರಿದಂತೆ ಹಲವರಿದ್ದರು.

Leave a Comment