ದುಷ್ಚಟಗಳಿಂದ ದೂರವಿರಲು ಕರೆ

ರಾಮದುರ್ಗ, ಜು 17- ಗುರು ಶಿಷ್ಯರ ಸಂಬಂಧ ತಾಯಿ ಮಕ್ಕಳ ಭಾಂದವ್ಯದಂತೆ ಇರುತ್ತದೆ. ಗುರು ಪೂರ್ಣಿಮೆ ದಿವಸ ಗುರು ಶಿಷ್ಯರು ಸಮಾಗಮಕ್ಕೆ  ಉತ್ತಮ ವೇದಿಕೆ ಎಂದು ಕಟಕೋಳ- ಎಂ.ಚಂದರಗಿಯ ವೀರಭದ್ರಶಿವಾಚಾರ್ಯರು ಹೇಳಿದರು.
ತಾಲೂಕಿನ ಎಂ. ಚಂದರಗಿಯ ಗುರುಗಡದೇಶ್ವರ ಸಂಸ್ಥಾನಮಠದಲ್ಲಿ ಗುರುಪೌರ್ಣಿಮೆಯ ಅಂಗವಾಗಿ ಗುರು ಶಿಷ್ಯರ ಸಮಾವೇಶದಲ್ಲಿ ನಡೆದ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದ ಪೂಜ್ಯರು ಗುರು ಕೊಟ್ಟ ಇಷ್ಟ ಲಿಂಗವನ್ನು ನಿಷ್ಟೆಯಿಂದ ಪೂಜೆ ಮಾಡಿ ಧರ್ಮಾಧಾರಿತ ಜೀವನ ನಡೆಸುವ ಮೂಲಕ ಜೀವನ ಸಾರ್ಥಕ ಪಡೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವ್ಯಸನ ಮುಕ್ತ ಶಾಖಾಹಾರಿ ಜೀವನದಿಂದ ಸಂತಸ,  ಸಮೃದ್ಧಿ ಮತ್ತು ನೆಮ್ಮದಿಯ ಜೀವನ ನಡೆಸಲು ಸಾದ್ಯವಿದ್ದು ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು.
ಡಿಸೆಂಬರ ತಿಂಗಳಲ್ಲಿ ಭಕ್ತರು ಮತ್ತು ಶಿಷ್ಯರು ನಡೆಸಲುದ್ಧೇಶಿಸಿರುವ ತಮ್ಮ ಷಷ್ಠಬ್ಧಿ ಸಮಾರಂಭದಲ್ಲಿ 108 ಶಿಷ್ಯರ ಮತ್ತು ಜಂಗಮ ಷಷ್ಠಬ್ಧಿ ಆಚರಿಸಿದ ನಂತರ ಆಚರಿಸಿಕೊಳ್ಳುವುದಾಗಿ ಹೇಳಿದರು. ವೀರಶೈವ ಲಿಂಗಾಯತ ಧರ್ಮ ಜಾತ್ಯಾತೀತ ಧರ್ಮವಾಗಿದ್ದು ಶ್ರೀಮಠದಿಂದ ಕರ್ನಾಟಕ, ಆಂದ್ರ ಪ್ರದೇಶ ಮತ್ತು ಗೋವಾ ರಾಜ್ಯ ಸೇರಿದಂತೆ ವಿವಿಧ ಜಾತಿಯ 81 ಸಾವಿರ ಭಕ್ತರಿಗೆ ಲಿಂಗದೀಕ್ಷೆ ನೀಡುವ ಮೂಲಕ ಸಮಾನತೆ ಸಾರಿದೆ ಎಂದು ಹೇಳಿದರು.
ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಕಾಣಲು ವಿದ್ಯಾಗುರುವಿನ ಜೊತಗೆ ಆಧ್ಯಾತ್ಮ ಗುರುವಿನ ಮಾರ್ಗದರ್ಶನದಿಂದ ಜೀವನಕ್ಕೆ ಬೆಳಕು ಕಾಣಲು ಸಾಧ್ಯವಿದೆ ಎಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನರಸಾಪೂರದ ಮರಳುಸಿದ್ಧಲಿಂಗ ಶಿವಾಚಾರ್ಯರು ಹೇಳಿದರಲ್ಲದೆ ಬೇಡಿದ್ದನ್ನು ಕರುಣಿಸುವ ಶಕ್ತಿ ಆದ್ಯಾತ್ಮ ಗುರುವಿನಲ್ಲಿದೆ ಎಂದು ಹೇಳಿದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಶಿಷ್ಯನಾದವನು ಗುರುವಿನ ಆಜ್ಞೆ ಪಾಲಿಸಬೇಕು ಮತ್ತು ಸೇವೆಯನ್ನು ಕಾಯಾ, ವಾಚಾ ಮತ್ತು ಮನಸಾ ಮಾಡಿದರೆ ಗುರುವಿನ ಋಣ ತೀರಿಸಲು ಸಾಧ್ಯವಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಂಬೈನ ಶ್ರೀಯೋಗಿ ಷಡಕ್ಷರಯ್ಯ ಹಿರೇಮಠ ಇವರಿಗೆ ಜಗದ್ಗುರು ರೇಣುಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ವೀರಭದ್ರ ಶಿವಯೋಗಿ ಶಿವಾಚಾರ್ಯರ ತುಲಾಬಾರ ಸೇವೆ ನಡೆಯಿತು.
ಮುಂಜಾನೆ ಗುರು ಹಾಗೂ ಶಿಷ್ಯರ ಸಾಮೂಹಿಕ ಶಿವಪೂಜೆ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಿತು. ಕಾರ್ಯಕ್ರಮದಲ್ಲಿ  ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ಧ ಶಿವಾಚಾರ್ಯರು, ರೇಣುಕ ಗಡದೇಶ್ವರ ದೇವರು, ಬಿಜಗುಪ್ಪಿಯ ರೇಣುಕ ಶಿವಯೋಗಿ ಶಿವಾಚಾರ್ಯರು, ಅಶೋಕ ಪೂಜೇರ, ಟಿ. ಪಿ. ಮುನೋಳ್ಳಿ, ಮಹಾದೇವ ದಾನನ್ನವರ, ಎನ್. ಬಿ. ದಂಡಿನದುರ್ಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Comment