ದುಷ್ಕರ್ಮಿಗಳ ಗುಂಡಿಗೆ ಶಿಕ್ಷಕಿ ಬಲಿ

ವೀರಾಜಪೇಟೆ. ಜೂ. 14. ಶಾಲೆಗೆ ಕರ್ತವ್ಯಕ್ಕಾಗಿ ತೆರಳಲು ಬಸ್ಸಿಗೆ ಕಾಯುತ್ತ ನಿಂತಿದ್ದ ಶಿಕ್ಷಕಿಯ ಮೇಲೆ ಕೆಲವು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿರುವ ಪ್ರಕರಣ ಇಂದು ಬೆಳಿಗ್ಗೆ ತಾಲೂಕಿನ ಬಾಳೆಲೆ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಶಿಕ್ಷಕಿ ಆಶಾಕಾವೇರಮ್ಮ (38) ಎಂದು ತಿಳಿದು ಬಂದಿದೆ. ಆಶಾ ಕಾವೇರಮ್ಮ ವೀರಾಜಪೇಟೆಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಎಂದಿನಂತೆ ಇಂದು ಬೆಳಿಗ್ಗೆ ಆಶಾ ಕಾವೇರಮ್ಮ ವೀರಾಜಪೇಟೆಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರು. ಈ ಸಂಧರ್ಭದಲ್ಲಿ ಜಗದೀಶ್ ಎಂಬಾತ ಸೇರಿದಂತೆ ಮತ್ತಿಬ್ಬರು ಆಶಾಕಾವೇರಮ್ಮನ ಮೇಲೆ ಗುಂಡು ಹಾರಿಸಿ ಹತ್ಯೆಗೈದರು. ಆಶಾಕಾವೇರಮ್ಮನ ಹತ್ಯೆಗೆ ನಿಖರ ಕಾರಣ ಏನು? ಎಂಬುದು ಇನ್ನೂ ತಿಳಿದು ಬಂದಿಲ್ಲ. ಆಶಾ ಕಾವೇರಮ್ಮನ ಹತ್ಯೆಯ ನಂತರ ದುಷ್ಕರ್ಮಿಗಳಲ್ಲೊಬನಾದ ಜಗದೀಶ್ ತಾನೂ ಸಹಾ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಪ್ರಕರಣವು ವೀರಾಜಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

Leave a Comment