ದುಷ್ಕರ್ಮಿಗಳಿಂದ ಯುವಕನ ಬರ್ಬರ ಹತ್ಯೆ

ಮೈಸೂರು:ಮಾ.20-  ಯುವಕನೋರ್ವನನ್ನು ಕೆಲವು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ 10ಗಂಟೆಯ ಸಮಯದಲ್ಲಿ ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆಯ ಬಳಿ ಸಂಭವಿಸಿದೆ.
ಕೊಲೆಯಾದಾತನನ್ನು ರಾಘವೇಂದ್ರ ನಗರದ ನಿವಾಸಿ  ಪೇಂಟರ್ ವೃತ್ತಿ ಮಾಡಿಕೊಂಡಿದ್ದ ಸುರೇಶ್(30) ಎಂದು ಗುರುತಿಸಲಾಗಿದೆ. ಈತ ಕಳೆದ ರಾತ್ರಿ 10ಗಂಟೆಯ ಸುಮಾರಿಗೆ ಮೆಡಿಕಲ್ ಶಾಪ್ ಗೆ ಮಾತ್ರೆ ತರಲೆಂದು ಬಂದಿದ್ದು, ರಾತ್ರಿ 12ಗಂಟೆ ಆದರೂ ಮನೆಗೆ ವಾಪಸ್ ಆಗಿರಲಿಲ್ಲ. ಗಾಬರಿಯಾದ ಮನೆಯವರು ಆತನನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಆತ ಎಲ್ಲಿಯೂ ಕಾಣಿಸುವುದಿಲ್ಲ. ಲೀಡ್ಸ್ ಜ್ಯೋತಿ ಪಬ್ಲಿಕ್ ಶಾಲೆಯ ಬಳಿ ನಾಯಿಗಳ ಚೀರಾಟ ಕೇಳಿ ಬರುತ್ತಿದ್ದುದ್ದನ್ನು ಗಮನಿಸಿದ ಪೋಷಕರು ಅಲ್ಲಿಗೆ ತೆರಳಿದಾಗ ಸುರೇಶ್ ಕತ್ತಿಗೆ ಗಾಜಿನ ತುಂಡಿನಿಂದ ಬಲವಾಗಿ ಹಲ್ಲೆ ಮಾಡಲಾಗಿದ್ದರಿಂದ ಅತ ಹೆಣವಾಗಿ ಬಿದ್ದಿದ್ದ. ಕೂಡಲೇ ಈ ವಿಷಯವನ್ನು ಉದಯಗಿರಿ ಠಾಣೆಯ ಪೊಲೀಸರಿಗೆ ತಿಳಿಸಲಾಯಿತು.ಉದಯಗಿರಿ ಠಾಣೆಯ ಎಸಿಪಿ ರಾಜಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮೃತ ಶರೀರವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Leave a Comment