ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ

ಧಾರವಾಡ, ಅ 11- ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬುಧವಾರ ಸಂಜೆ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು.
ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ದುರ್ಗಾದೇವಿಯ ಅಲಂಕೃತ ಬೆಳ್ಳಿ ಮೂರ್ತಿಯನ್ನು ಮರವಣಿಗೆ ಮೂಲಕ ವಿದ್ಯಾಗಿರಿ ಮುಖ್ಯ ರಸ್ತೆಯಿಂದ ಪ್ರಾರಂಭಿಸಿ  ಗಾಂಧಿನಗರದ ಸಾಯಿ ಬಾಬಾ ಗುಡಿ, ಬಂಡೆಮ್ಮ ದೇವಸ್ಥಾನದ ಮಾರ್ಗವಾಗಿ ಈಶ್ವರ ದೇವಸ್ಥಾನದ ಆವರಣದಲ್ಲಿನ ನಿರ್ಮಿಸಿದ್ದ ಭವ್ಯ ಮಂಟಪದಲ್ಲಿ ದೇವಿ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.
ಮೆರವಣಿಗೆಯಲ್ಲಿ ಕುಂಭ ಹೊತ್ತ ನೂರಾರು ಸುಮಂಗಲೆಯರು ಪಾಲ್ಗೊಂಡಿದ್ದರು. ಜಗ್ಗಲಗಿ, ಜಾಂಝ್, ಡೊಳ್ಳು ಕುಣಿತ ಮೇಳಗಳು ಗಮನಸೆಳೆದವು. ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಯ ಅಧ್ಯಕ್ಷ ಗುರುರಾಜ ಹುಣಸಿಮರದ, ಗಣಪತರಾವ್ ಮುಂಜಿ, ಪಿ.ಎಸ್.ಕಿರೇಸೂರ, ಬಸವರಾಜ ಗುಡ್ಡದ, ವಿಲಾಸ ತಿಬೇಲಿ, ವಾಯ್.ಬಿ.ಕದಂ, ನಾರಾಯಣ ಕೋಪರ್ಡೆ, ಪುರುಷೋತ್ತಮ ಪಟೇಲ, ಅನುರಾಧಾ ಆಕಳವಾಡಿ, ಸದಾಶಿವ ದೊಡ್ಡಮನಿ, ಕೇಶವ ಬಾಡಕರ, ವಿವಿಧ ಮಹಿಳಾ ಹಾಗೂ ಭಜನಾ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು.

Leave a Comment