ದುರಹಂಕಾರಿ ಸರ್ಕಾರಕ್ಕೆ ಜನತೆಯಿಂದ ತಕ್ಕಪಾಠ

ಸಿಂಧನೂರು.ಮಾ.14- ಬಡ ಜನತೆ, ದೀನ ದಲಿತ ಪರ ಜಾದಳ ಪಕ್ಷ ಕುರಿತು ಹಗುರ ಹೇಳಿಕೆ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲವೆಂದ ಮಾಜಿ ಮುಖ್ಯಮಂತ್ರಿ ಹಾಲಿ ಜಾದಳ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಜನತೆಯೇ ಮುಂಬರುವ ಚುನಾವಣೆಯಲ್ಲಿ ದುರಹಂಕಾರಿ ಸರ್ಕಾರಕ್ಕೆ ತಕ್ಕಪಾಠ ಕಲಿಸಲಿದ್ದಾರೆಂದರು.
ಪಟ್ಟಣದಲ್ಲಿ ಹಮ್ಮಿಕೊಂಡ ವಿಕಾಸಪರ್ವ ಸಮಾವೇಶ ಬಳಿಕ ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದನ್ನೇ ಮರೆತಿರುವ ಆಡಳಿತ ಸರ್ಕಾರ ಬರೀ ಜಾಹೀರಾತು ಅಭ್ಯುದಯಕ್ಕೆ ಸೀಮಿತವಾಗಿ ಜಾಹೀರಾತು ಸರ್ಕಾರ ಎನ್ನುವುದನ್ನು ಸಾಬೀತು ಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನ ಸಾಮಾನ್ಯರು ಸೇರಿದಂತೆ ದಕ್ಷಾಧಿಕಾರಿಗಳಿಗೆ ರಕ್ಷಣೆಯಿಲ್ಲದಂತಾಗಿದೆ.
ರಾಜ್ಯಾದ್ಯಂತ ಅಕ್ರಮ ಮರಳು ದಂಧೆ, ಮಟ್ಕಾ ಹಾಗೂ ಕ್ರಿಕೆಟ್ ಬೆಟ್ಟಿಂಗ್‌ಗೆ ಪರೋಕ್ಷ ಸಹಕರಿಸಲಾಗುತ್ತಿದೆ. ಜಾದಳ ಪಕ್ಷ ಕುರಿತಾದ ಮುಖ್ಯಮಂತ್ರಿಗಳ ಹೇಳಿಕೆ ಅಲ್ಲಗೆಳೆದ ಅವರು, ತಮ್ಮ ಅಧಿಕಾರಾವಧಿಯಲ್ಲಿನ ವೃದ್ಧರು, ಅಂಗವಿಕಲರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಉಪನ್ಯಾಸಕರು, ರೈತಪರವಾದ ಅಭಿವೃದ್ಧಿ ಕಾರ್ಯ ಪರಾಮರ್ಶೆ ಬಹಿರಂಗ ಸವಾಲೆಸೆದರು. ಕಾಂಗ್ರೆಸ್ ದುರಾಡಳಿತಕ್ಕೆ ರಾಜ್ಯದ ಜನತೆ ಬೇಸತ್ತಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ದುರಹಂಕಾರಿ ಸರ್ಕಾರವನ್ನು ರಾಜ್ಯದ ಜನತೆಯೇ ಮನೆಗೆ ಕಳುಹಿಸಲಿದ್ದಾರೆಂದು ಭವಿಷ್ಯ ನುಡಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಉಸ್ತುವಾರಿ ಟಿ.ಎ.ಶರವಣ, ಮಾಜಿ ಸಚಿವ ಬಂಡೇಪ್ಪ ಕಾಶೆಂಪುರ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಶ್ರೀನಾಥ, ಸಿದ್ದುಬಂಡಿ ಇನ್ನಿತರರು ಉಪಸ್ಥಿತರಿದ್ದರು.

Leave a Comment