ದುನಿಯಾ ಯಶಸ್ಸಿನ ಮೇಲೆ ದುನಿಯಾ-೨

ದುನಿಯಾ-೨ ಸದ್ದಿಲ್ಲದೆ ತೆರೆಗೆ ಸಿದ್ಧವಾಗಿದೆ. ದುನಿಯಾದಲ್ಲಿ ವಿಜಿ ನಾಯಕನಾಗಿದ್ದರೆ, ಲೂಸ್ ಮಾದ ಯೋಗಿ ದುನಿಯಾ-೨ ನಾಯಕನಾಗಿದ್ದಾರೆ. ದುನಿಯಾ ಚಿತ್ರದಿಂದ ಯಶಸ್ಸು ಕಂಡ ನಿರ್ಮಾಪಕ, ಯೋಗಿ ತಂದೆ ಸಿದ್ದರಾಜು ಮತ್ತೆ ದುನಿಯಾ-೨ ಚಿತ್ರಕ್ಕೆ ಹಣ ಹೂಡಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಪೂರ್ಣಗೊಳಿಸಿರುವ ದುನಿಯಾ_೨ ಚಿತ್ರದ  ಹಾಡುಗಳು ಬಿಡುಗಡೆಯು ಇತ್ತೀಚಿಗೆ ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ನಡೆದಿದ್ದು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ  ದುನಿಯಾ-೨ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಹಾಗೂ ಮೊದಲಬಾರಿ ನಿರ್ದೇಶನ ಮಾಡಿರುವ ಹರಿ ಅವರು ದುನಿಯಾ ಚಿತ್ರದ ಪ್ರೇರಣೆಯಿಂದ ಕತೆಯನ್ನು ಸಿದ್ದಪಡಿಸಲಾಗಿದೆ. ಮೆಜಸ್ಟಿಕ್‌ನಲ್ಲಿ ಕತ್ತಲೆಯ ದುನಿಯಾವನ್ನು ತೋರಿಸುವ ಪ್ರಯತ್ನ.ಮಾಡಲಾಗಿದೆ.

ಶೇಕಡ ೯೯ರಷ್ಟು ಸಿನೆಮಾದ ಚಿತ್ರೀಕರಣವನ್ನು  ೪೭ ದಿನಗಳ ಕಾಲ ರಾತ್ರಿ ವೇಳೆ ಬೆಂಗಳೂರು ಸುತ್ತಮುತ್ತ ನಡೆಸಲಾಗಿದ್ದು ದುನಿಯಾ ಇದು ಯಶಸ್ಸು ಕಾಣಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಅಂದು ದುನಿಯಾದ ಎಲ್ಲಾ ಹಾಡಿಗೆ ಕೀ ಬೋರ್ಡ್ ಆಗಿ ಬಿ.ಜೆ.ಭರತ್ ಕೆಲಸ ಮಾಡಿದ್ದು, ಇಂದು ದುನಿಯಾ_೨ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದಾರೆ ಒಳ್ಳೆಯದಾಗಲಿ ಎಂದು ವಿ.ಮನೋಹರ್ ಶುಭಕೋರಿದರು.

ನಾಯಕಿ ಹಿತಾಚಂದ್ರಶೇಖರ್ ಮೊದಲ ಚಿತ್ರ ಲೂಸ್ ಮಾದ ಯೋಗಿ ನಾಯಕನಾಗಿದ್ದ ಸ್ನೇಕ್‌ನಾಗ್ ಅರ್ಧಕ್ಕೆ ನಿಂತುಹೋಯಿತು.ಮತ್ತೆ ಲೂಸ್ ಮಾದ ಜೊತೆಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿತಂದಿದೆ.ಚಿತ್ರದಲ್ಲಿನ  ಪಾತ್ರದ ಕುರಿತು ಹೇಳುವುದಾದರೆ ನನ್ನದು ಗಾರ್ಮೆಂಟ್ಸ್ ಹುಡುಗಿಯ ಪಾತ್ರ ಗಂಭೀರ ಸ್ವಭಾವದವಳಾಗಿ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ.

ಕೆಲಸ ಮಾಡುತ್ತಾ ಗಂಭೀರ ಸ್ವಭಾವದವಳಾಗಿ, ನಗುವನ್ನು ನೋಡದೆ ಜೀವನವನ್ನು ಸಾಗಿಸುತ್ತಿರುತ್ತೇನೆ. ರಾತ್ರಿ ವೇಳೆ ಅಲ್ಲಿಗೆ ಏತಕ್ಕಾಗಿ ಹೋಗಿದ್ದೆ ಎಂಬುದನ್ನು ಸಿನಿಮಾ ನೋಡಿ ಎಂದು ಮಾದ್ಯಮದ ಪ್ರಶ್ನೆಗಳಿಂದ ಜಾರಿಕೊಂಡರು.

ಕಳೆದ ೧೦ ವರ್ಷಗಳಿಂದ ಚಿತ್ರರಂಗದಲ್ಲಿ ಗೆಲುವು, ಸೋಲು ಕಂಡಿದ್ದೇನೆ. ೨೦೧೪,೧೫ ಇಷ್ಟದ ವರ್ಷ. ಈ ಅವಧಿಯಲ್ಲಿ ಸಕ್ಸಸ್ ಬರಲಿಲ್ಲ. ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಉದ್ಯಮದಲ್ಲಿ ನನ್ನನ್ನು ಕಡೆಗಣಿಸಿದರು. ಮತ್ತೆ ಎದ್ದು ಬಂದಿದ್ದೇನೆ. ಮೊದಲ ಚಿತ್ರದಲ್ಲಿ ಪುಡಿರೌಡಿಯಾಗಿ ಲೂಸ್ ಹೆಸರಿನೊಂದಿಗೆ ಗುರುತಿಸಿಕೊಂಡಿದ್ದೆ.
ಭಾಗ-೨ರಲ್ಲಿ ನಾಯಕನಾಗಿ ಟ್ರಾವಲ್ಸ್ ಏಜೆಂಟ್ ಪಾತ್ರ. ಕಷ್ಟ,ಸುಖ.  ನಗು ಬಂದಾಗ ಕುಡಿಯುತ್ತೇನೆ. ಜನನ ಮರಣ ಇಷ್ಟದ ಹಾಡು ಎಂದರು ನಾಯಕ ಯೋಗಿ.

ಮೊದಲ ಚಿತ್ರದಲ್ಲಿ ನಿರ್ಮಾಪಕನಾಗಿ ಎಲ್ಲವನ್ನು ಕಂಡಿದ್ದೆ. ಇಂದು ಮೂವರು ಗೆಳೆಯರು ಹಣ ಹೂಡಿದ್ದಾರೆ. ೬ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಮಾರ್ಚ್‌ನಲ್ಲಿ ತೆರೆಗೆ ತರುವ ಯೋಜನೆ ಇದೆ ಎನ್ನುತ್ತಾರೆ ನಿರ್ಮಾಪಕ ಟಿ.ಪಿ.ಸಿದ್ದರಾಜು.ನಿರ್ಮಾಪಕರ ಪತ್ನಿ ಪತ್ನಿ ಅಂಬುಜಾಸಿದ್ದರಾಜು, ಕಾರ್ಯನಿರ್ವಾಹಕ ನಿರ್ಮಾಪಕ ಪ್ರಕಾಶ್,  ಯೋಗಿ ಅಣ್ಣ ಮಹೇಶ್, ಕಡ್ಡಿಪುಡಿಚಂದ್ರು, ಸತ್ಯಹೆಗಡೆ ಎಲ್ಲರು ದುನಿಯಾ ನೆನಪುಗಳನ್ನು ಹಂಚಿಕೊಂಡರು.

Leave a Comment