ದೀದಿ-ಓವೈಸಿ ನಡುವೆ ವಾಗ್ಸಮರ

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಹೈದರಾಬಾದ್ ಮೂಲದ ಅಲ್ಪಸಂಖ್ಯಾತ ಕೆಲ ತೀವ್ರಗಾಮಿಗಳನ್ನು ಗಮನಿಸಲಾಗುತ್ತಿದೆ ಎಂದು ಹೇಳುವ ಮೂಲಕ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ತಿರುಗೇಟು ನೀಡಿದ್ದಾರೆ.

ಉತ್ತರ ಬಂಗಾಳದ ಕೊಚ್ಬೆಹಾರ್ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ತನ್ನ ಗತವೈಭವವನ್ನು ಮರುಕಳಿಸಲು ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತ ಉಗ್ರವಾದತ್ವದ ಬಗ್ಗೆ ಮಾತನಾಡಿದ್ದಾರೆ. ಮತ್ತು ಇದೇ ಸಮಯದಲ್ಲಿ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ.

ಹೈದರಾಬಾದ್ ಸಂಸದ ಓವೈಸಿ, ಕಳೆದ ಐದು ವರ್ಷಗಳಿಂದ ತಮ್ಮ ಪಕ್ಷದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಹೊರಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ಆರ್ಪಿಐ ಪಕ್ಷದೊಂದಿಗೆ ಮೈತ್ರಿಯಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ಗೆ ಭಾರೀ ಹೊಡೆತ ಕೊಟ್ಟಿತ್ತು.

ಓವೈಸಿ ಪಕ್ಷ ಇತ್ತೀಚೆಗೆ ಕಿಸಾನ್ಗುಂಜ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈ ಕ್ಷೇತ್ರವೂ ಪಶ್ಚಿಮಬಂಗಾಳದ ಅಲ್ಪಸಂಖ್ಯಾತ ಕೇಂದ್ರವಾಗಿದ್ದು, ಈ ಕ್ಷೇತ್ರವನ್ನು ಬ್ಯಾನರ್ಜಿ ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು.

ಒಂದು ವೇಳೆ ದೀದಿ ನಮ್ಮ ಹೈದರಾಬಾದ್ ಗುಂಪಿನ ಬಗ್ಗೆ ಚಿಂತೆ ಮಾಡುವುದಾದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ 42 ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಹೇಗೆ ಗೆಲುವು ಸಾಧಿಸಿತು ಎಂಬುದನ್ನು ಅವರು ಹೇಳಲಿ ಎಂದು ಓವೈಸಿ ಪಶ್ವಿಮಬಂಗಾಳ ಸಿಎಂ ಬ್ಯಾನರ್ಜಿಯನ್ನು ಪ್ರಶ್ನೆ ಮಾಡಿದ್ದರು.

Leave a Comment