ದಿ.20ರಂದು ಮಗುವಿನ ಜೊತೆಗೊಂದು ಸಸಿ ಬೆಳೆಸಿ

ಧಾರವಾಡ ಅ.18- ಜೊತೆ ಜೊತೆಯಲಿ ಶೀರ್ಷಿಕೆ ಅಡಿಯಲ್ಲಿ ಮಗುವಿನ ಜೊತೆಗೊಂದು ಸಸಿ ನೆಟ್ಟು ಬೆಳೆಸಿ ಎಂದು ನಗರದ ಮಿಡ್ ಟೌನ್ ರೋಟರಿ ಕ್ಲಬ್ ವತಿಯಿಂದ ವಿನೂತನ ಕಾರ್ಯಕ್ರಮವನ್ನು ದಿ.20 ರಂದು  ಬೆಳಿಗ್ಗೆ 9-30ಕ್ಕೆ ನಾರಾಯಣಪೂರದ ರೋಟರಿ ಮಿಡ್ ಟೌನ ಶಾಲೆಯಲ್ಲಿ ಹಮ್ಮಿಕೊಂಡಿದೆ. ಖ್ಯಾತ ಪರಿಸರವಾದಿ ಪಂಡಿತ ಮುಂಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಅತಿಥಿಗಳಾಗಿ ಖ್ಯಾತ ಸರ್ಜನ ಡಾ.ಚಿದಾನಂದ ರಾಮನಗೌಡರ ಆಗಮಿಸಲಿದ್ದಾರೆಂದು ಮಿಡ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಡಾ.ಪ್ರಕಾಶ ರಾಮನಗೌಡರ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರಕೃತಿಯನ್ನು ತಾಯಿಗೆ ಹೋಲಿಸಲಾಗುತ್ತದೆ ಪ್ರಕೃತಿ ಮಾತೆ ತನ್ನ ಮಡಿಲಲ್ಲಿ ಅಸಂಖ್ಯಾತ ಜೀವರಾಸಿಯನ್ನು ಹೊತ್ತು ನಮ್ಮನ್ನೆಲ್ಲಾ ಸಾಕಿ ಸಲಹುತ್ತದೆ ಆದರೆ ನಾವು ಆ ಪ್ರಕೃತಿ ಮಾತೆಯನ್ನು ಕಾಪಾಡುತ್ತಿದ್ದೇವಾ? ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಕಾರಣ ಪರಿಸರ,ಪ್ರಕೃತಿ ಅದೋಗತಿಗೆ ತಲುಪುತ್ತಿದ್ದು ಅದನ್ನು ನಾವು ಉಳಿಸಿ-ಬೇಳೆಸುವ ಕೆಲಸವಾಗಬೇಕು ಮದುವೆಯಾದ ಹೆಣ್ಣೋಬ್ಬಳು ಗರ್ಭೀಣಿಯಾಗಿ ತನ್ನ ಉದರದಲ್ಲಿ ಬೆಳೆದ ಆ ಮಗು ಜನಿಸಿದಾಗ ಆ ತಾಯಿಗೆ,ಆ ಕುಟುಂಕ್ಕೆ ಆಗುವ ಸಂತೋಷ ಅಸ್ಟಿಷ್ಟಲ್ಲ. ಮಗುವಿನ ಮೊದಲು ಅಳು ಮೊದಲ ಸೂರ್ಯನ ಬೆಳಕು ಗಾಳಿ ಪ್ರಕೃತಿಯ ಸ್ಪರ್ಶದಿಂದ ಆ ಮಗುವಿ ಹೊಸ ಬದುಕು ಆರಂಭ ಆಗುತ್ತದೆ.ಅದೇ ರೀತಿಹುಟ್ಟಿದ ಮಗುವಿನ ಹೆಸರಿನಲ್ಲಿ ಆ ತಾಇಗೆ ಹಣ್ಣಿನ ಸಸಿಗಳನ್ನು ಕೊಟ್ಟು ತನ್ನ ಮಗುವಿ ಜೊತೆ ಅದೇ ಕಾಳಜಿಯಿಂದ ಅದನ್ನು ಪೋಷಿಸುವ ಜವಾಬ್ದಾರಿಯನ್ನು ವಹಿಸುವ ವಿನೂತನ ಕಾರ್ಯಕ್ರಮವಾಗಿದೆ ಎಂದು ಡಾ.ಪ್ರಕಾಶ ರಾಮನಗೌಡರ ವಿವರಿಸಿದರು.
ನಗರದ ಹೆರಿಗೆ ಆಸ್ಪತ್ರೆ ಸೇರಿದಂತೆ ಡಾ,ಎಸ್.ಆರ್.ರಾಮನಗೌಡರ ಸನರ್ಸಿಂಗ್ ಹೋಮ್, ಅಮರಜ್ಯೋತಿ ಆಸ್ಪತ್ರೆ, ಕಾರ್ಪೋರೇಶನ್ ಆಸ್ಪತ್ರೆ, ಮಂಗಳ ಹೆರಿಗೆ ಆಸ್ಪತ್ರೆ, ಪ್ರಶಾಂತ ನರ್ಸಿಂಗ್ ಹೋಮ್ ಸೇರಿದಂತೆ ಪ್ರತಿ ವಾರ ಕ್ಲಬ್ ಸದಸ್ಯರು ಬೇಟಿ ನೀಡಿ ಪೇರು,ಮಾವು,ಸೀತಾಫಲ ಹಣ್ಣಿನ ಗಿಡಗಳನ್ನು ನೀಡಲಾಗುವದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ವಿಜಯಕುಮಾರ ನೀಲರೆಡ್ಡಿ,ಉದ್ಯಮಿ ಸಂಗನಗೌಡ ರಾಮನಗೌಡರ ಉಪಸ್ಥಿತರಿದ್ದರು.

Leave a Comment