ದಿ. 19 ರಂದು ಹೆಜ್ಜೆ ಮಜಲು ಉದ್ಘಾಟನೆ

ಹುಬ್ಬಳ್ಳಿ, ಸೆ. 14 – ನಗರದ ಮಸೂತಿ ಓಣಿ, ಗೋಪನಕೊಪ್ಪದಲ್ಲಿ  ಪ್ರತಿ ವರ್ಷದಂತೆ  ಈ ವರ್ಷವು  ದಿ. 19 ರಂದು   ಸಾ. 7 ಗಂಟೆಗೆ ಸವಾರಿ ಇರಲಿದೆ.    ಇದರ ಪ್ರಯುಕ್ತ     5-6 ಹೆಜ್ಜೆ ಮಜಲುಗಳು    ಒಂದಕ್ಕೊಂದು    ಕಣ್ಮನ  ಸೆಳೆಯಲಿವೆ.  ಹೆಜ್ಜೆ ಮಜಲಿನ ಉದ್ಘಾಟನೆಯನ್ನು  ಹು-ಧಾ ಮಹಾನಗರ ಪಾಲಿಕೆಯ  ಸದಸ್ಯ ಪಿ.ಕೆ. ರಾಯನಗೌಡ್ರ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ   ಅನ್ವರ ಹಂಚನಾಳ,   ಈರಪ್ಪ ಮುದಕಣ್ಣಿ,    ಬಾಬುಸಾಬ  ಮಾಮಾಜಿ, ಬಾಬುಸಾಬ ಬಾಣಿ,  ನಬಿಸಾಬ ನದಾಫ,   ಮಕಬುಲ್ ಬಾಣಿ, ತೌಸೀಫ ಮಾಮಾಜಿ, ಖಾಲಿಕ ಬಾಣಿ,  ಬಸವರಾಜ ಅಂಗಡಿ,   ಶ್ಯಾನು  ಮಾಮಾಜಿ,  ಹೈದರದಾವಲಬಾಯಿ, ಮಾಬುಲಿ ನದಾಫ,  ಫೀರಸಾಬ ನದಾಫ,  ಮುಕ್ತಾರ ಬಾಣಿ,   ಗುರದಯ್ಯ ತೇಜಪ್ಪನವರ,  ಇನ್ನಿತರರು ಸೇರಿದಂತೆ  ಭಾಗವಹಿಸಲಿದ್ದಾರೆ.
ದಿ. 20 ರಂದು   ಸಂಜೆ  6 ಗಂಟೆಗೆ  ಕತ್ತಲರಾತ್ರಿಯಂದು   ಎಲ್ಲ ಹಿಂದೂ-ಮುಸ್ಲಿಂ ಭಕ್ತಾಧಿಗಳು   ದರ್ಗಾಕ್ಕೆ ಬಂದು   ಪೂಜೆ ಹಾಗೂ ಸಕ್ಕರೆ, ಬೆಲ್ಲ  ಎಡೆಮಾಡಿ  ಹೋಗುವ ಸಾಂಪ್ರದಾಯವು ಇರಲಿದೆ.
ದಿ. 21 ರಂದು   ಶುಕ್ರವಾರದಂದು    ಬೆ. 7 ಗಂಟೆಗೆ   ದೇವರ ಅಗ್ನಿ ಪ್ರವೇಶಿಸುವ ಪದ್ದತಿಯೊಂದಿಗೆ  ಸಾಯಂಕಾಲ    ದೇವರುಗಳು   ಕೊನೆಯ ದಿನದಂದು  ಹೊಳೆಗೆ ಹೋಗುವ ಮೂಲಕ ಹಬ್ಬಕ್ಕೆ ತೆರೆ ಬೀಳಲಿದೆ.
ಈ ಕಾರ್ಯಕ್ರಮಕ್ಕೆ  ಮಾಧ್ಯಮದವರು ಬಂದು  ಮಿಡಿಯಾದಲ್ಲಿ ಹಾಗೂ   ಪತ್ರಿಕೆಗಳಲ್ಲಿ  ಪ್ರಕಟಿಸಬೇಕೆಂದು ಬೀಬಿ ಫಾತೀಮಾ ದರ್ಗಾ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment