ದಿ 13 ರಿಂದ ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾ ಮಹೋತ್ಸವ

ಲಕ್ಷ್ಮೇಶ್ವರ,ಜ12-ಸಮೀಪದ ಹೂವಿನಶಿಗ್ಲಿ ವಿರಕ್ತಮಠದ 40ನೇ ಜಾತ್ರಾಮಹೋತ್ಸವ ಮತ್ತು ಲಿಂ.ಶ್ರೀಮ.ನಿ.ಪ್ರ ನಿರಂಜನ ಮಹಾಸ್ವಾಮಿಗಳವರ 9 ನೇ ಪುಣ್ಯಸ್ಮರಣೋತ್ಸವ ಜರುಗಲಿದ್ದು ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಜನೇವರಿ 13ರಿಂದ 16 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಮಹಾಸ್ವಾಮಿಗಳು ಹೇಳಿದರು.

 
ಅವರು ಶ್ರೀಮಠದಲ್ಲಿ ಸುದ್ದಿಗಾರರಿಗೆ ಜಾತ್ರಾಮಹೋತ್ಸವದ ಮಾಹಿತಿ ನೀಡಿ ದಿನಾಂಕ 13 ರಂದು ಮುಂಜಾನೆ 7 ಘಂಟೆಗೆ ಮೈಸೂರು-ಬನ್ನಿಕೊಪ್ಪ ಜಪದಕಟ್ಟಿಮಠದ ಸುಜ್ಞಾನದೇವ ಶಿವಾಚಾರ್ಯರ ಸಾನಿಧ್ಯ ಲಿ0ಗದಿಕ್ಷೆ ಹಾಗೂ ಆಯ್ಯಾಚಾರ, 9 ಘಂಟೆಗೆ ಹತ್ತಿಮತ್ತೂರಿನ ವಿರಕ್ತಮಠದ ನಿಜಗುಣ ಮಹಾಸ್ವಾಮಿಗಳವರು ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಸಂಜೆ 7 ಘಂಟೆಗೆ ಪ್ರವಚನ ಮಹಾಮಂಗಲ ಕಾರ್ಯಕ್ರಮ ಜರುಗಲಿದ್ದು, ಮುರಾಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳರವರು ಸಾನಿಧ್ಯ,  ಸವಣೂರಿನ ಕಲ್ಮಠದ ಮಹಾಂತ ಮಹಾಸ್ವಾಮಿಗಳು ಅಧ್ಯಕ್ಷತೆ, ದೊಡ್ಡಹುಣಸೇಮಠದ ಚನ್ನವೀರಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ.

 

 
ದಿನಾಂಕ 14 ರಂದು ಮುಂಜಾನೆ 8 ಘಂಟೆಗೆ ಲಿಂ.ಶ್ರೀಮ.ನಿ.ಪ್ರ ನಿರಂಜನ ಮಹಾಸ್ವಾಮಿಗಳವರ ಭಾವಚಿತ್ರ ಮೆರವಣಿಗೆ ಸಾಯಂಕಾಲ 5 ಘಂಟೆಗೆ ಮಹಾರಥೋತ್ಸವ, ಸಾಯಂಕಾಲ 7 ಘಂಟೆಗೆ ಪೂಜ್ಯರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಸಾನಿಧ್ಯ ಮುಂಡರಗಿ ಸಂಸ್ಥಾನಮಠದ ಡಾ.ಅನ್ನದಾನೇಶ್ವರ ಮಹಾಸ್ವಾಮಿಗಳು, ಅಧ್ಯಕ್ಷತೆ ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ದಲಿಂಗ ಮಹಾಸ್ವಾಮಿಗಳು, ನೇತೃತ್ವ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮಿಗಳು, ಸಮ್ಮುಖ ನವಲಗುಂದ ಗವಿಸಿದ್ದೇಶ್ವರಮಠದ ಬಸವಲಿಂಗಮಹಾಸ್ವಾಮಿಗಳು ವಹಿಸಲಿದ್ದಾರೆ.

 

 
ನುಡಿನಮನವನ್ನು ಸಾಹಿತಿ ಕೆ.ಎ.ಬಳಿಗಾರ ನುಡಿಯಲಿದ್ದಾರೆ. ಮುಖ್ಯಅಥಿತಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೆಕಾರ, ಬಸವರಾಜ ಬೊಮ್ಮಾಯಿ, ರಾಮಣ್ಣ ಲಮಾಣಿ, ವಿ.ಪ ಸದಸ್ಯ ಪ್ರದೀಪ ಶೆಟ್ಟರ, ಶಿವರಾಜ ಸಜ್ಜನರ, ಮೋಹನ ಮೆಣಸಿನಕಾಯಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.

 

 
ದಿನಾಂಕ 15 ರಂದು ಬೆಳಿಗ್ಗೆ 10.30 ಕ್ಕೆ ಸಾಮೂಹಿಕ ವಿವಾಹ ಜರುಗಲಿದ್ದು ದಿವ್ಯ ಸಾನಿಧ್ಯವನ್ನು ಬಾಳೆಹೊಸೂರಿನ ದಿಂಗಾಲೇಶ್ವರಮಠದ ಶ್ರೀದಿಂಗಾಲೇಶ್ವರ ಮಹಾಸ್ವಾಮಿಗಳು, ಅಧ್ಯಕ್ಷತೆ ಬೆಳ್ಳಟ್ಟಿಯ ರಾಮಲಿಂಗೇಶ್ವರಮಠದ ಬಸವರಾಜ ಮಹಾಸ್ವಾಮಿಗಳು, ನೇತೃತ್ವ ಹಾವೇರಿಯ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ಎಲ್.ಸಿ.ಲಿಂಬಯ್ಯಸ್ವಾಮಿಮಠ, ಎಂ.ಎಸ್.ದೊಡ್ಡಗೌಡ್ರ ಸೇರಿದಂತೆ ಮುಂತಾದವರು ಆಗಮಿಸಲಿದ್ದಾರೆ.

 

 
ಸಾಯಂಕಾಲ 4 ಘಂಟೆಗೆ ಗುರುಕುಲ ಶಾಲಾ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ, 5 ಘಂಟೆಗೆ ಕಡುಬಿನ ಕಡುಬಿನೋತ್ಸವ ಜರುಗಲಿದೆ. 6 ಘಂಟೆಗೆ ಮಹಾತ್ಮರ ಬದುಕು-ಬೆಳಕು ಚಿಂತನಗೋಷ್ಠಿ ಜರುಗಲಿದ್ದು ಸಾನಿಧ್ಯ ಹೊಸರಿತ್ತಿಯ ಗುದ್ದಲೀಶ್ವರಮಠದ ಗುದ್ದಲೀಶ್ವರ ಮಹಾಸ್ವಾಮಿಗಳು, ಅಧ್ಯಕ್ಷತೆ ಗುಡ್ಡದಾನ್ವೇರಿಯ ವಿರಕ್ತಠಮಠದ ಶಿವಯೋಗಿಶ್ವರ ಮಹಾಸ್ವಾಮಿಗಳು, ನೇತೃತ್ವ ಕಟ್ನೂರು-ತೀರ್ಥದ ಚನ್ನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ, ಮುಖ್ಯಅಥಿತಿಗಳಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಜಿ.ಪಂ.ಅಧ್ಯಕ್ಷ ಎಸ್.ಪಿ.ಬಳಿಗಾರ, ಟಿ.ಈಶ್ವರ, ಎಂ.ಎಂ.ಹಿರೇಮಠ, ಅಶೋಕ ಮುಳಗುಂದಮಠ, ಬಸವರಾಜ ನೆಲವಿಗಿ, ಮಹಾಬಳೇಶ್ವರ ಬೇವಿನಮರದ, ರಮೇಶ ಮುದ್ದುಶೆಟ್ಟಿ, ರಾಜಣ್ಣ ಮೋರಗೇರಿ ಆಗಮಿಸಲಿದ್ದಾರೆ. ಧಾರವಾಡದ ಮಹಾದೇವ ಸತ್ತಿಗೇರ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ.

 
ದಿನಾಂಕ 16 ರಂದು ರಾಜ್ಯಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೇ ಜರುಗಲಿದೆ. ಕಾರ್ಯಕ್ರಮ ಪ್ರತಿದಿನ ಪೂಜ್ಯರ ತುಲಭಾರ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಗಳು ತಿಳಿಸಿದರು.

Leave a Comment