ದಿ ವೀಲ್ ಆಫ್ ಜಸ್ಟೀಸ್ ಕೃತಿ ಸೆ. 6 ಬಿಡುಗಡೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೪ ಬೆಂಗಳೂರು ವಕೀಲರ ಸಂಘ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪಮೊಯ್ಲಿ ಅವರು ರಚಿಸಿರುವ `ದಿ ವೀಲ್ ಆಫ್ ಜಸ್ಟೀಸ್` ಕೃತಿ ಸೆ. 6 ರಂದು ಲೋಕಾರ್ಪಣೆ ಗೊಳ್ಳಲಿದೆ.
ಹೈಕೋರ್ಟ್ ಆವರಣದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎಂ.ಎನ್. ವೆಂಕಟಚಲಯ್ಯ ಕೃತಿ ಲೋಕಾರ್ಪಣೆ ಗೊಳಿಸಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎನ್. ಕುಮಾರ್, ಸರ್ಕಾರ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಮಾಜಿ ಅಡ್ವೊಕೇಟ್ ಜನರಲ್ ಡಾ. ಬಿ.ವಿ. ಆಚಾರ್ಯ್, ರಾಷ್ಟ್ರೀಯ ಕಾನೂನು ಶಾಲೆ ವಿವಿ ಉಪಕುಲಪತಿ ಪ್ರೊ. ಆರ್. ವೆಂಕಟರಾವ್ ಹಾಗೂ ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಎ. ಗಂಗಾಧರಯ್ಯ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಮಯಾಣಂ ಮಹಾನ್ ವೇಷಣಂ ಸಿರಿ ಮುಡಿ ಪರಿಕ್ರಮಣಂ ಹಾಗೂ ಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಇದೀಗ ಕಾನೂನು ತಜ್ಞರು ಆಗಿರುವ ಡಾ. ವೀರಪ್ಪಮೊಯ್ಲಿ ಯವರು ದಿವೀಲ್ ಆಪ್ ಜಸ್ಟಿಸ್ ಕೃತಿ ರಚಿಸುವ ಮೂಲಕ ಕಾನೂನಿನ ಮೂಲ, ಕಾನೂನಿನ ಅಭಿವೃದ್ಧಿ, ಕಾನೂನು ಬ್ರಾತೃತ್ವಕ್ಕೆ ಸಂಬಂಧಿಸಿದ ವಿಚಾರ ಸೇರಿದಂತೆ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.

Leave a Comment