ದಿ ವಿಲನ್ ಮುಖಾಮುಖಿ

ಕರುನಾಡಿನ ಚಕ್ರವರ್ತಿಗಳಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಚೊಚ್ಚಲ ಅವರನ್ನು ’ವಿಲನ್; ಒಂದು ಗೂಡಿಸಿದೆ. ಕಾರಣಾಂತರದಿಂದ ದೂರ ದೂರ ಇದ್ದ ಈ ತಾರೆಯರನ್ನು ಒಟ್ಟುಗೂಡಿಸಿ ವೈಮನಸ್ಯ ದೂರ ಮಾಡಲು ನಿರ್ದೇಶಕ ಪ್ರೇಮ್ ಸಾಥ್ ನೀಡಿದ್ದಾರೆ. ’ವಿಲನ್ನಲ್ಲಿ ನಿಜವಾದ ವಿಲನ್ ಯಾರು ಎನ್ನುವುದು ಸದ್ಯಕ್ಕೆ ಎಲ್ಲರ ಮುಂದಿರುವ ಅತಿದೊಡ್ಡ ಕುತೂಹಲ.ಅದೇನೇ ಇರಲಿ. ’ವಿಲನ್ ಚಿತ್ರದ ಆಡಿಯೋ ಬಿಡುಗಡೆಯ ಸಮಯದಲ್ಲಿಯೂ ಒಬ್ಬರನ್ನೊಬ್ಬರನ್ನು ಹೊಗುಳುತ್ತಲೇ ಒಬ್ಬರನ್ನೊಬ್ಬರು ಕಾಲೆಳೆಯುವ ಮತ್ತು ಪರಸ್ಪರ ಟಾಂಗ್ ನೀಡುವ ಕೆಲಸ ಮುಂದುವರಿಯಿತು.

the-villain_270

ಸರಿ ಸುಮಾರು ನಾಲ್ಕೂವರೆಯಿಂದ ಐದು ಗಂಟೆಗಳ ಕಾಲ ನಡೆದ ಮಾರಾಥಾನ್ ಕಾರ್ಯಕ್ರಮದಲ್ಲಿ ಹೊಗಳಿಕೆ, ತೆಗಳಿಕೆ ನಡುವೆ ನಿರೂಪಕಿ ಅನೂಶ್ರೀ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಪ್ರೇಮಾಲಾಪ ಕಿರಿ ಕಿರಿಗೂ ಕಾರಣವಾಯಿತು. ನೋಡುವ ತನಕ ನೋಡಿದ ಹಿರಿಯ ನಟ ಅಂಬರೀಷ್ ..ಹೇ.. ನಾನು ನೋಡ್ತಾ ಇದ್ದೇನೆ… ಒಂದು ವರ್ಷದಿಂದ ಹೇಳಿದ್ದನ್ನೇ ಹೇಳುತ್ತಿದ್ದಾಳೆ. ಅವಳನ್ನು ವೇದಿಕೆಯಿಂದ ಕೆಳಗಿಳಿಸ್ರೋ ಎಂದು ನೇರವಾಗಿಯೇ ಅಸಮಾಧಾನ ಹೊರಹಾಕಿದರು.

ಸ್ಟಾರ್ ಡಮ್ ಬಂದಿದೆ ಎಂದು ಮೆರೆಯುವುದು  ಒಳ್ಳೆಯದಲ್ಲ. ಅಭಿಮಾನಿಗಳಿಂದ ನಾವು, ಈಗಿರುವಾಗ ನಾನು, ನನ್ನಿಂದಲೇ ಎನ್ನುವುದನ್ನು ಬಿಡಿ. ನಾವೂ ಎನ್ನುವುದನ್ನು ಕಲಿಯಿರಿ, ಎಷ್ಟು ದಿನ ಒಳ್ಳೆಯವನಾಗಿರಲಿ .. ನಾನೂ ವಿಲನ್ ನೇ….”

– ಶಿವರಾಜ್‌ಕುಮಾರ್.

“’ವಿಲನ್ ಯಾರೂ ಅನ್ನೋದು ಮುಖ್ಯವಲ್ಲ. ದಿನ ಬೆಳಗಾದರೆ ಯುದ್ದ ಇದ್ದದ್ದೇ.ಅವಕಾಶ ಸಿಕ್ಕಾಗ ಒಟ್ಟಿಗೆ ಕೆಲಸ ಮಾಡೋಣ. ಪ್ರೇಮ್ ಬಿಲ್ಡಪ್, ಶೋ ಮ್ಯಾನ್ ಅಂತಾರೆ. ಅರೆ ಅದರಲ್ಲಿ ತಪ್ಪೇನಿದೆ. ಪ್ರಚಾರಕ್ಕೆ ಮಾಡಲಿ ಬಿಡಿ. ಕೈಲಾಗದವರು ಮೈ ಪರಚಿಕೊಳ್ಳಲಿ ಬಿಡಿ.”

-ಸುದೀಪ್

ಯಾವುದೇ ಚಿತ್ರ ಮಾಡಿದರೂ ಜನರನ್ನು ಚಿತ್ರಮಂದಿರಕ್ಕೆ ಕರೆ ತರುವುವುದ ನಮ್ಮ ಕೆಲಸ. ಸಿನಿಮಾಕ್ಕೆ ಬಂದ ಮೇಲೆ ಕೆಟ್ಟ ಚಿತ್ರ ಅಂತ ಬೈಯಲಿ ಬಿಡಿ, ಇಲ್ಲ ಅಥವಾ ಒಳ್ಳೆಯ ಚಿತ್ರ ಎನ್ನಲಿ. ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ಮುಖ್ಯ. ದೊಡ್ಡ ಚಿತ್ರ ಮಾಡುವಾದ ತಡವಾಗುತ್ತದೆ ಹಾಗಂತ ನಾನು ಬಿಳಿಯಾನೆಯಲ್ಲ ಹಸು ರೀತಿ.

-ಪ್ರೇಮ್

ಸುದೀರ್ಘ ಸಮಯ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತೆಲುಗು ನಟ ಶ್ರೀಕಾಂತ್, ಕನ್ನಡದಲ್ಲಿ ಸಿಡಿ ಬಿಡುಗಡೆಯನ್ನೂ ಹೀಗೆಲ್ಲಾ ಮಾಡುತ್ತಾರೆ ಅಂದುಕೊಂಡರೂ ಅಚ್ಚರಿಯಿಲ್ಲ. ಧ್ವನಿ ಸುರುಳಿ ಬಿಡುಗಡೆ ಮಾಡಿದ ಅಂಬರೀಷ್ ಚಿತ್ರಕ್ಕೆ ಮತ್ತು ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು. ಮೊದಲು ಚಿತ್ರದ ಬಗ್ಗೆ ಮಾತನಾಡಿದ ಶಿವಣ್ಣ, ಕೇರಳ ಮತ್ತು ಕೊಡಗಿನಲ್ಲಿ ಸಂತ್ರಸ್ಥರಾದ ಜನರಿಗೆ ಮಾನವೀಯತೆಯಿಂದ ಸಹಾಯ ಮಾಡೋಣ ಎಂದರು. ಯಾರೂ ಕೂಡ ಸ್ಟಾರ್‌ಡಮ್ ಬಂದಿದೆ ಎಂದು ಮೆರೆಯಬಾರದು ಎಲ್ಲವೂ ಅಭಿಮಾನಿಗಳಿಂದ ಎನ್ನುವುದನ್ನು ಅರಿಯಬೇಕು. ಸುದೀಪ್ ಅವರ ಜೊತೆ ಶಾಂತಿ ನಿವಾಸ ಚಿತ್ರದಲ್ಲಿ ಹಾಡಿನಲ್ಲಿ ಕಾಣಿಸಿಕೊಂಡಿದ್ದೆ. ಆ ಬಳಿಕ ವಿಲನ್‌ನಲ್ಲಿ ಜೊತೆಯಾಗಿದ್ದೇವೆ. ಚಿತ್ರತಂಡದೊಂದು ಕೆಲಸ ಮಾಡಿದ ಅನುಭವ ಉತ್ತಮವಾಗಿತ್ತು, ನಿರ್ಮಾಪಕ ಮನೋಹರ್ ಎಲ್ಲರನ್ನು ಮಕ್ಕಳ ರೀತಿ ನೋಡಿಕೊಂಡರು. ಕಲಾವಿದನಾಗಿ ಪಾತ್ರೆ ತೊಳೆಯುವ ಪಾತ್ರದಿಂದ ಹಿಡಿದು ಕಸ ಗುಡಿಸುವ ಪಾತ್ರ ಮಾಡಲು ಸಿದ್ದ ಎಂದರು.

ನಟ ಸುದೀಪ್, ದಿನ ಬೆಳಗಾದರೆ ಯುದ್ದ ಇದ್ದದ್ದೇ. ಜೊತೆಯಾಗಿ ನಟಿಸುವ ಅವಕಾಶ ಸಿಕ್ಕಾಗ ನಟಿಸೋಣ. ಶಿವರಾಜ್ ಕುಮಾರ್ ಅವರ ಓಂ ಸಿನಿಮಾವನ್ನು ೧೫ ಬಾರಿ ನೋಡಿದ್ದೇನೆ. ಅವರ ಜೊತೆ ಕೆಲಸ ಮಾಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ನಟನಾಗಿ ಅವರು ಕೊಟ್ಟ ಶತ ದಿನ ಒಡಿದ ಚಿತ್ರಗಳನ್ನು ನಾನು ನೀಡಿಲ್ಲ. ಅವರದು ೩೫ ವರ್ಷಗಳ ಸುದೀರ್ಘ ಪಯಣ. ಆದರೂ ಅಭಿಮಾನಿಗಳನ್ನು ನನ್ನನೂ ಗುರುತಿಸುತ್ತಾರೆ . ಂದರೆ ನಾನೂ ಏನಾದರೂ ಚಿಕ್ಕದಾಗಿಯಾದರೂ ಮಾಡಿರಬೇಕಲ್ಲ. ಅಭಿಮಾನಿಗಳು ಶೀಟಿ ಹೊಡೆಯಲಿ ಅಥವಾ ಹೊಡೆಯದಿರಲಿ. ಪ್ರೀತಿ ಸದಾ ಇದ್ದೇ ಇರುತ್ತದೆ. ಶಿವಣ್ಣ ಜೊತೆ ಕಲಿ ಸಿನಿಮಾ ಮಾಡಬೇಕಾಗಿತ್ತು. ಅದರ ಹೆಸರೇ ಒಂಥರಾ ಇದೆ. ಕೆಲವರು ಅದನ್ನು ಟಚ್ ಮಾಡಬೇಡಿ ಎಂದರು. ಹೀಗಾಗಿ ವಿಲನ್ ಚಿತ್ರ ಮಾಡಿದ್ದೇವೆ ಎಂದು ಹೇಳಿಕೊಂಡರು.

ನಿರ್ದೇಶಕ ಪ್ರೇಮ್, ಇಬ್ಬರು ದಿಗ್ಗಜರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಚಿತ್ರ ತಯಾರಾಗುವಾಗ ಕೆಲ ಬಾರಿ ಅಡೆ ತಡೆ ಎದುರಾಗುತ್ತವೆ. ಎಲ್ಲವನ್ನೂ ನಿರ್ಮಾಪಕರು ಸಹಿಸಿಕೊಂಡಿದ್ದಾರೆ. ಇಬ್ಬರಲ್ಲಿ ವಿಲನ್ ಯಾರು ಎನ್ನುವುದನ್ನು ಮುಂದಿನ ತಿಂಗಳು ಚಿತ್ರಮಂದಿರದಲ್ಲಿ ನೋಡಿ ಎಂದರು.

ಚಿತ್ರದಲ್ಲಿ ತಾಯಿಯ ಸೆಂಟಿಮೆಂಟ್, ಇದೆ ಕ್ಲೈಮಾಕ್ಸ್ ನೋಡಿದ ಮಂದಿ ಭಾವುಕರಾಗುತ್ತಾರೆ ಅಷ್ಟರ ಮಟ್ಟಿಗೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ತೆಲುಗಿನ ಕಲಾವಿದೆ ಶರಣ್ಯಾ ತಾಯಿ ಪಾತ್ರದಲ್ಲಿ ನಟಿಸಿದ್ದು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹಾಗು ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಎಂದು ವಿವರ ನೀಡಿದರು.

ನಿರ್ಮಾಪಕ ಮನೋಹರ್, ಎರಡು ವರ್ಷ ಆಯಿತು. ವಿಲನ್ ಬಿಡುಗಡೆಗೆ ಸಿದ್ದವಾಗಿದೆ. ಕಲಿಯೂ ಕೂಡ ಬರುತ್ತದೆ ಎಂದು ಹೇಳಿಕೊಂಡರು.

Leave a Comment