ದಿ ಟೆರರಿಸ್ಟ್

ಅಲಂಕಾರ್ ಸಂತಾನ ನಿರ್ಮಿಸಿರುವ ‘ದಿ ಟೆರರಿಸ್ಟ್‘ ಚಿತ್ರ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಪಿ.ಸಿ.ಶೇಖರ್ ನಿರ್ದೇಶನದ  ಚಿತ್ರಕ್ಕೆ ಮುರಳಿ ಕ್ರಿಶ್ ಛಾಯಾಗ್ರಹಣವಿದೆ. ಎಸ್.ಪ್ರದೀಪ್‌ವರ್ಮ ಸಂಗೀತ ನಿರ್ದೆಶನ ಹಾಗೂ ಸರವಣನ್ ಸಂಕಲನ. ಚಿತ್ರಕ್ಕೆ ಸಚಿನ್ ಎಸ್.ಬಿ ಹೊಳಗುಂದಿ ಸಂಭಾಷಣೆ ಬರೆದಿದ್ದಾರೆ. ರಮೇಶ್ ಕುಮಾರ್ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ರಾಗಿಣಿ ದ್ವಿವೇದಿ, ಗಿರಿ ಶಿವಣ್ಣ, ಮನು ಹೆಗ್ಡೆ, ಸಮೀಕ್ಷ, ಕೃಷ್ಣ ಹೆಬ್ಬಾಳ್, ಭಾನು, ಪದ್ಮ ಶಿವಮೊಗ್ಗ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

vilan

ದಿ ವಿಲ್ಲನ್

ಶಿವರಾಜಕುಮಾರ್ ಹಾಗೂ ಸುದೀಪ್ ಅಭಿನಯದ  ಬಹುತಾರಾಗಣದ ಚಿತ್ರ  ದಿ ವಿಲ್ಲನ್ ಆಯುಧಪೂಜೆಯಂದು ‘ಬಿಡುಗಡೆಯಾಗಿದೆ.

‘ದಿ ವಿಲ್ಲನ್ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳ ಚಿತ್ರ ವಿದೇಶದಲ್ಲಿ ಏಕಕಾಲದಲ್ಲಿ ಬಿಡುಗಡೆ ಅಗಿದೆ.ಡಾ ಸಿ ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಹಿಂದಿ ನಟಿ ಎಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ, ಮುಕುಲ್ ದೇವ್, ಮೇಖ ಶ್ರೀಕಾಂತ್, ಶರಣ್ಯ ಪೊಂವಣ್ಣನ್, ಶರತ್ ಲೋಹಿತಾಶ್ವ ಹಾಗೂ ಇತರರು ಅಭಿನಯಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇಂದ ಯು/ಎ ಅರ್ಹತಾ ಪತ್ರ ಸಿಕ್ಕಿದೆ.

ಅರ್ಜುನ್ ಜನ್ಯ ರಾಗ ಸಂಯೋಜನೆಯ ‘ದಿ ವಿಲ್ಲನ್ ಚಿತ್ರದ ಆರು ಹಾಡುಗಳನ್ನು ರಚನೆ ಮಾಡಿರುವವರು ಚಿತ್ರದ ನಿರ್ದೇಶಕ ಪ್ರೇಮ್.

ಗಿರೀಶ್ ಆರ್ ಗೌಡ ಛಾಯಾಗ್ರಹಣ ‘ದಿ ವಿಲ್ಲನ್ ‘ರಾಮ ರಾವಣರ’ ಕಾಳಗ ಮೂರು ಘಂಟೆ ಆವದಿಯಲ್ಲಿ ಮೂಡಿ ಬರಲಿದೆ. ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಚಿತ್ರಕ್ಕಿದೆ.

Leave a Comment