ದಿವಿಜ್‌ಗೆ ಡಬಲ್ಸ್‌ ಗರಿ

ಸೇಂಟ್‌ ಪೀಟರ್ಸ್‌ಬರ್ಗ್‌, ಸೆ 23- ಭಾರತದ ದಿವಿಜ್‌ ಶರಣ್‌ ಮತ್ತು ಸ್ಲೊವೇಕಿಯಾದ ಇಗರ್‌ ಜೆಲೆನಯ್‌ ಅವರು ಸೇಂಟ್‌ ಪೀಟರ್ಸ್‌ಬರ್ಗ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ದಿವಿಜ್‌ ಮತ್ತು ಇಗರ್‌ 6-3, 3-6, 10-8ರಲ್ಲಿ ಇಟಲಿಯ ಮಟ್ಟೊ ಬೆರೆಟಿನಿ ಮತ್ತು ಸೈಮನ್‌ ಬೊಲೆಲಿ ಎದುರು ಗೆದ್ದರು. ಈ ಹೋರಾಟ ಒಂದು ಗಂಟೆ 17 ನಿಮಿಷ ನಡೆಯಿತು.

ದಿವಿಜ್‌ ಅವರು ವೃತ್ತಿಬದುಕಿನಲ್ಲಿ ಗೆದ್ದ ಐದನೇ ಎಟಿಪಿ ಕಿರೀಟ ಇದಾಗಿದೆ. ಈ ಋತುವಿನಲ್ಲಿ ಜಯಿಸಿದ ಎರಡನೇ ಟ್ರೋಫಿ. ಈ ವರ್ಷದ ಆರಂಭದಲ್ಲಿ ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಓಪನ್‌ನಲ್ಲೂ ಚಾಂಪಿಯನ್‌ ಆಗಿದ್ದರು.

Leave a Comment