ದಿಲ್‌ಬರ್ ದಿಲ್‌ಖುಷ್ ಬೆಲ್ಲಿಯಲ್ಲಿ ಬಳುಕಿದ ಸುಷ್ಮಾ

ಇತ್ತೀಚೆಗಂತೂ ಚಿತ್ರರಂಗದಲ್ಲಿ ಹಳೆಯ ಜನಪ್ರಿಯ ಹಾಡುಗಳು ಮತ್ತು ಸಿನಿಮಾಗಳು ಮತ್ತೆ ಮತ್ತೆ ತೆರೆಯ ಮೇಲೆ ಬರುತ್ತಿವೆ. ಇದೀಗ ಬಾಲಿವುಡ ಬೆಡಗಿ ವಿಶ್ವಸುಂದರಿ ಸುಶ್ಮಿತಾ ಸೇನ್ ಇಪ್ಪತ್ತು ವರ್ಷಗಳ ಮತ್ತೆ ಸೊಂಟ ಬಳುಕಿಸಿದ್ದಾರೆ.

ಈ ಬಾರಿ ಬೆಲ್ಲಿ ಡ್ಯಾನ್ಸ್‌ಗೆ ಹಾಕಿದ ಹೆಜ್ಜೆ ಬಾಲಿವುಡ್ ಮಂದಿಯನ್ನು ದಂಗು ಬಡಿಸಿದೆ. ಅದರ ಪರಿಣಾಮ ವಯಸ್ಸು ಐವತ್ತರ ಹಾಸು ಪಾಸಿನಲ್ಲಿದ್ದರೂ ಸುಶ್ಮಿತಾ ಬಳುಕಿಸಿದ ಸೊಂಟೆದ ನಡುವಿಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ.
ಎರಡು ದಶಕಗಳ ಹಿಂದೆ ತಾವೇ ಕುಣಿದಿದ್ದ ಹಾಡಿಗೆ ಸುಶ್ಮಿತಾ ಸೇನ್ ಬೆಲ್ಲಿಯ ಸ್ಪರ್ಶ ನೀಡಿದ್ದಾರೆ. ತಾವು ಬೆಲ್ಲಿ ಡ್ಯಾನ್ಸ್ ಮಾಡಿದ ನೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಿಲ್‌ಬರ್ ಹಾಡು ಇದೀಗ ವಿನೂತನ ರೀತಿಯಲ್ಲಿ ಮೂಡಿ ಬಂದಿದೆ. ‘ಸತ್ಯಮೇವ ಜಯತೆ’ ಚಿತ್ರಕ್ಕಾಗಿಈ ಹಾಡನ್ನು ರಿಮೀಕ್ಸ್ ಮಾಡಲಾಗಿದ್ದು, ಈ ರಿಮೀಕ್ಸ್ ಹಾಡಿನಲ್ಲಿ ನೋರಾ ಫತೇಹಿ ಮಾದಕತೆಯಿಂದ ತಮ್ಮ ಸೊಂಟವನ್ನು ಬಳುಕಿಸಿದ್ದಾರೆ.
ತನ್ನ ಡ್ಯಾನ್ಸ್ ವಿಡಿಯೋದಲ್ಲಿ ಸುಶ್ಮಿತಾ ಬೆಲ್ಲಿ ಡ್ಯಾನ್ಸ್ ಮಾಡುತ್ತ ವರ್ಕೌಟ್ ಬಳಿಕ ಸುಶ್ಮಿತಾ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ಮತ್ತು ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡಿರುವ ನಡೆ ಬಾಲಿವುಡ್‌ನ ಇತರೆಗ ನಟೀಯರಿಗೆ ಹೊಟ್ಟೆಕಿಚ್ಚು ಮೂಡವಂತಾಗಿದೆ.
೧೯೯೯ರ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ’ಸಿರ್ಫ್ ತುಮ್’ ಚಿತ್ರದಲ್ಲಿ ಈ ಹಾಡಿಗೆ ನಟ ಸಂಜಯ್ ಕಪೂರ್ ಜೊತೆ ಸುಶ್ಮಿತಾ ಸೇನ್ ಹೆಜ್ಜೆ ಹಾಕಿದ್ದರು. ಆಗ ಹಾಡು ಸಾಕಷ್ಟು ಹಿಟ್ ಆಗಿತ್ತು. ಇದೀಗ ಸುಶ್ಮಿತಾ ಸೇ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಮಾದಕತೆಯ ಮೈಮಾಟ ಅನಾವರಣ ಮಾಡಿದ್ದಾರೆ.
ಬಾಲಿವುಡ್ ಮತ್ತು ಅಭಿಮಾನಿಗಳಿಂದ ಎಲ್ಲೆಡೆ ವ್ಯಕ್ತವಾಗಿರುವ ಅಭಿಪ್ರಾಯಕ್ಕೆ ಸುಶ್ಮಿತಾ ಸೇನ್ ದಿಲ್‌ಖುಷ್ ಆಗಿದ್ದಾರೆ. ಒಂದರ್ಥದಲ್ಲಿ ದಿಲ್‌ಬರ್ ಹಾಡು ಅಭಿಮಾನಿಗಳನ್ನು ದಿಲ್ ಖುಷಿ ಮಾಡಿಸಿರುವುದು ಸುಶ್ಮಿತಾ ಅವರನ್ನು ಇಂತಹ ಇನ್ನಷ್ಟು ಹಾಡು ಮಾಡುವ ಉತ್ಸಾಹ ಹೆಚ್ಚು ಮಾಡಿದೆ.

ಎರಡು ದಶಕಗಳ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿದ್ದ ದಿಲ್‌ಬರ್ ಹಾಡು ಇದೀಗ ಮತ್ತೊಮ್ಮೆ ಅಭಿಮಾನಿಗಳ ಮನ ಸೂರೆಗೊಂಡಿದೆ.ಹೀಗಾಗಿ ಅಭಿಮಾನಿಗಳು ದಿಲ್‌ಖುಷ್ ಆಗಿದ್ದಾರೆ.

Leave a Comment