ದಿನೇಶ್ ಗುಂಡೂರಾವ್ ಗಡಿಪಾರಿಗೆ ಪ್ರತಿಭಟನೆ

ರಾಯಚೂರು.ಏ.16- ಉತ್ತರ ಪ್ರದೇಶ ಮುಖ್ಯಮಂತ್ರಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್ ರವರನ್ನು ಗಡಿಪಾರು ಮಾಡುವಂತೆ ಭಾರತೀಯ ಜನತಾಪಕ್ಷ ನಗರ ಘಟಕ ಜಿಲ್ಲಾಡಳಿತ ಕಾರ್ಯಾಲಯದಲ್ಲಿ ಪ್ರತಿಭಟನಾ ನಿರತವಾಗಿ ಒತ್ತಾಯಿಸಿತು.
ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವರಾಗಿರುವ ದಿನೇಶ್ ಗುಂಡೂರಾವ್ ರವರು ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಲ್ಲದೇ ಅಸಂವಿಧಾನಿಕ ಪದ ಬಳಕೆ ಮಾಡಲಾಗಿರುವುದು ಖಂಡನೀಯ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರ ಹೇಳಿಕೆ ಗಂಭೀರವಾಗಿ ಪರಿಗಣಿಸಿ ದಿನೇಶ ಗುಂಡೂರಾವ್ ರವರನ್ನು ಕಾರ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಕೂಡಲೇ ಗಡಿಪಾರು ಮಾಡುವಂತೆ ಪ್ರತಿಭಟನಾ ನಿರತವಾಗಿ ಆಗ್ರಹಿಸಲಾಯಿತು.
ಮಾಜಿ ಶಾಸಕ ಎ.ಪಾಪಾರೆಡ್ಡಿ, ಶಿಸ್ತು ಸಮಿತಿ ಅಧ್ಯಕ್ಷ ಎನ್.ಶಂಕ್ರಪ್ಪ, ಡಾ.ಶಿವರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ನಗರಧ್ಯಕ್ಷ ಯು.ದೊಡ್ಡಮಲ್ಲೇಶಪ್ಪ, ಶಶಿಧರ ಮಸ್ಕಿ, ಅಶೋಕ ಗಸ್ತಿ, ರಾಜೇಶ ಜೈನ್, ಬಂಡೇಶ ವಲ್ಕಂದಿನ್ನಿ, ಆರ್.ಕೆ. ಅಮರೇಶ, ಹರವಿ ನಾಗನಗೌಡ, ಶಿವಬಸ್ಸಪ್ಪ ಮಾಲಿಪಾಟೀಲ್, ಎ.ಚಂದ್ರಶೇಖರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment