ದಿನಾಚರಣೆ ನೆಪದಲ್ಲಿ ಸೀರೆ ಹಂಚಿಕೆ : ನೂಕು-ನುಗ್ಗಲು

ಕುಂದಗೋಳ ಮಾ.13: ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣ ಎದುರು ಗುರುವಾರ ಹಜರತಲಿ ಜೋಡಮನಿ ಅವರ ಅಭಿಮಾನಿ ಬಳಗ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಂದಗೋಳ ವಿಧಾನಸಭಾ ಮತಕ್ಷೇತ್ರದ ವಿವಿಧ ಮಹಿಳಾ ಸಂಘಟನೆಗಳ ಸುಮಾರು 3 ಸಾವಿರ ಮಹಿಳೆಯರು ಸೀರೆ ಪಡೆಯಲು ವೇದಿಕೆಯತ್ತ ನೂಕು ನುಗ್ಗಲಿನ ದೃಶ್ಯ ಕಂಡು ಸಾರ್ವಜನಿಕರಲ್ಲಿ ಓಟಿಗಾಗಿ ದಿನಾಚರಣೆ ನೆಪದಲ್ಲಿ ಸೆರಗಿಲ್ಲದ ಸೀರೆ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತು.
ಈ ಮದ್ಯ ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಕಲ್ಯಾಣಪುರ ಬಸವಣ್ಣಜ್ಜನವರು ಮಾತನಾಡಿ ತ್ಯಾಗ ಮನೋಭಾವನೆಗೆ ಮಹಿಳೆಯೇ ಮುಖ್ಯವಾಗಿದ್ದು, ದೇಶದಲ್ಲಿ ಶಾಂತಿ-ಸಮಾಧಾನ-ಸಂಸ್ಕøತಿ ನೆಲೆಸಬೇಕಾದರೆ ಮಹಿಳೆಯೋರ್ವಳು ಮುಖ್ಯವಾಗಿದ್ದು, ಅವಳೇ ಸದಾ ಅನ್ನಪೂರ್ಣೆ, ಸಮುದ್ರ ಭಾವನೆಯ ಹೆಣ್ಣೆಂಬ ಮಹಿಳೆ ಸಮಾಜದ ಮುಖ್ಯ ವಾಹಿನಿಯಾಗಿದ್ದಾಳೆ ಎಂದು ಹೇಳಿದರು.
ಸ್ಥಳೀಯ ಚನ್ನವೀರ ಸ್ವಾಮಿಗಳು, ಅಣ್ಣಿಗೇರಿ ತ್ರಿವಿಧ ದಾಸೋಹಮಠದ ಶಿವಕುಮಾರ ಸ್ವಾಮಿಜಿ, ಸಂಶಿ ಜನಾಬ ಸೈಯದ ಮೀರಾಹುಸೇನ ಪೀರಜಾದೆ ಅವರು ಆಶೀರ್ವಚನ ನೀಡಿದರು. ರೈತಮುಖಂಡ ಹಜರತಲಿ ಜೋಡಮನಿ ಕಾರ್ಯಕ್ರಮ ಉದ್ಗಾಟಿಸಿ, ಕಾರ್ಯಕ್ರಮದಲ್ಲಿದ್ದ ಮಹಿಳೆಯರಿಗೆ ಸೀರೆ ವಿತರಿಸಿದರು.

Leave a Comment