ದಿನಚರಿ ಬಿಡುಗಡೆ, ಸನ್ಮಾನ 13 ರಂದು

 

ಕಲಬುರಗಿ ಜ 11: ಕರ್ನಾಟಕ ರಾಜ್ಯ  ಸರಕಾರಿ ಮುಸ್ಲಿಂ ನೌಕರರ ಸಂಘ ಜಿಲ್ಲಾಘಟಕದ ವತಿಯಿಂದ ಜನವರಿ 13 ರಂದು ಸಂಜೆ 6.45 ಕ್ಕೆ ನಗರದ ಚೆಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ 2019 ನೆಯ ಸಾಲಿನ ದಿನಚರಿ ಬಿಡುಗಡೆ  ಮತ್ತು ಉತ್ತಮ ಸೇವೆ ಸಲ್ಲಿಸಿದ ನೌಕರರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಮೊಹ್ಮದ್ ಅಜೀಮುದ್ದಿನ್ ಶಿರ್ನಿಫರೋಶ್ ಮತ್ತು ಎಸ್ ಎಂ ಜಾಗೀರದಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಉತ್ತರವಲಯ ಶಾಸಕರಾದ ಖನೀಜ್ ಫಾತಿಮಾ ಉದ್ಘಾಟಿಸುವರುಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದಿನಚರಿ ಬಿಡುಗಡೆ ಮಾಡುವರು . ಮುಖ್ಯ ಅತಿಥಿಗಳಾಗಿ ಶಾಸಕರಾದ ಡಾ ಅಜಯಸಿಂಗ್ ದತ್ತಾತ್ರೇಯ ಪಾಟೀಲ ರೇವೂರ,ಬಸವರಾಜ ಮತ್ತಿಮೂಡ ಶರಣ ಬಸವ ವಿವಿಯ ಕುಲಪತಿ ಡಾ ನಿರಂಜನ ನಿಷ್ಠಿ ಕೆಬಿಎನ್ ವಿವಿಯ ನಿರ್ದೇಶಕ ಡಾ ಸೈಯದ್ ಮುಸ್ತಫಾ ಅಲ್ ಹುಸೈನಿ  ಸೇರಿದಂತೆ ಅನೇಕ ಗಣ್ಯರು ಆಗಮಿಸುವರು ಎಂದರು

ಸುದ್ದಿಗೋಷ್ಠಿಯಲ್ಲಿ ಮೀರ್ ಮಹ್ಮದ್ ಅಲಿ,ಸೈಯದ್ ನಜೀರೊದ್ದಿನ ಮುತವಲಿ, ಅಬ್ದುಲ ಖದೀರ ,ಮೊಹ್ಮದ್ ಅಬ್ದುಲ್ ಅಜೀಮ್ ಕಾರಿಗರ್  ಸೇರಿದಂತೆ ಹಲವರಿದ್ದರು..

Leave a Comment