ದಿನಗೂಲಿ ಮಹಿಳೆಯರು ನೀರು ಪಾಲು

ಕಾರಟಗಿ, ಸೆ.4: ಸಮೀಪದ  ಮೈಲಾಪುರು ಸೇತುವೆ ಬಳಿ ಎಡದಂಡೆ ನಾಲೆಯ ಮೇಲೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಐವರು ದಿನಗೂಲಿ ಮಹಿಳೆಯರು ನೀರುಪಾಲಾಗಿ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ.

ಒಟ್ಟು  ೧೬ ರು ಕೂಲಿ ಕಾರ್ಮಿಕ  ಮಹಿಳೆಯರಲ್ಲಿ ನಾಲ್ಕು ಜನ ಕಾಣೆಯಾಗಿದ್ದು ಒಬ್ಬರ ಶವ ಪತ್ತೆಯಾಗಿದೆ.ಮೃತಮಹಿಳೆಯನ್ನು ನವಲಿ ಗ್ರಾಮದ  ದ್ಯಾವಮ್ಮ ತಂ/ಸೊಮಪ್ಪ ಎಲಿಗಾರ (೨೧) ಎಂದು ಗುರುತಿಸಲಾಗಿದೆ.

ದಿನ ನಿತ್ಯ ಎಂದಿನಂತೆ ಹೊಟ್ಟೆಪಾಡಿಗಾಗಿ ಕೃಷಿ ಚಟುವಟಿಕೆಗೆ ತೆರಳಿದ್ದ ಮಹಿಳೆಯರು ಕೃಷಿ ಕೆಲಸ ಮುಗಿಸುಕೊಂಡು  ಸ್ವ ಗ್ರಾಮಗಳಾದ ಸೋಮನಾಳ ಕ್ಯಾಂಪ್ ಮತ್ತು ನವಲಿ ಗ್ರಾಮಗಳಿಗೆ ಈ ದಿನಗೂಲಿ ಮಹಿಳೆಯರು  ಎಡದಂಡೆ ನಾಲೆಯ ಮೇಲೆ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು .

ಈ  ವೇಳೆಯಲ್ಲಿ  ಚಾಲಕನ ನಿಯಂತ್ರಣ ತಪ್ಪಿ, ಟ್ರ್ಯಾಲಿ ಸಮೇತ  ಟ್ರ್ಯಾಕ್ಟರ್ ಉರುಳಿ ಬಿದ್ದಿದೆ.  ಟ್ರ್ಯಾಕ್ಟರ್ ನಲ್ಲಿ ಒಟ್ಟು ೧೬ ಜನ ಪ್ರಯಣಿಸುತ್ತಿದ್ದರು.
ಟ್ರ್ಯಾಕ್ಟರ್ ಹಾಗು ಟ್ರ್ಯಾಲಿ  ನೀರಿಗೆ  ಜಾರುತ್ತಿದ್ದಂತೆ ೮ ಜನ ಈಜಿ ದಡ ಸೇರಿದರು.    ಇತರೆ ಮೂವರನ್ನು  ಸ್ಥಳೀಯರು ರಕ್ಷಿಸಿದ್ದು , ಅವರಲ್ಲಿ ಇಬ್ಬರನ್ನು   ಗೌರಮ್ಮ ಗಂ/ಪಂಪಾಪತಿ ಮಡಿವಾಳ, ಈರಮ್ಮ ಗಂ/ ಯಮನಪ್ಪ ಮಡಿವಾಳರನ್ನು , ಕಾರಟಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ  ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸರೋಜಮ್ಮ ಗಂ/ ತಿಮ್ಮಣ್ಣ ಸೋಮನಾಳರವರು ಕೋಮಾ ಸ್ಥಿತಿಯಲ್ಲಿದ್ದು ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಸರಕಾರಿ ಅಸ್ಪತ್ರೆಗೆ  ದಾಖಲಿಸಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ವಿಶೇಷ ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಕಾರಟಗಿ ಪಿಎಸ್ಐ ಶಿವಕುಮಾರ್ ರವರ ಹತ್ತಿರ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ತೀವ್ರ ಶೋಧ : ಸ್ಥಳೀಯ ಸಂಸ್ಥೆಗಳ ಚುಣಾವಣೆ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ತಡವಾಗಿ ಅಗಮಿಸಿದ ಸ್ಥಳೀಯ ಪೊಲೀಸರು ಜಮಾಯಿಸಿದ್ದ ಜನರನ್ನು ಚದುರಿಸುವಲ್ಲಿ  ಹರಸಾಹಸ ಪಟ್ಟರು.
ಕಾಣೆಯಾದವರ  ಶೋಧಕ್ಕೆ ಅಗ್ನಿಶಾಮಕ ಸಿಬ್ಬಂದಿ ,ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಕ್ಕೆ ಮುಂದಾಗಿದ್ದರೆ.  ಕ್ರೇನ್ ಸಹಾಯದಿಂದ ಟ್ರ್ಯಾಕ್ಟರ್ ಎಂಜಿನ್ ನನ್ನು ಮೇಲೆತ್ತಲಾಯಿತು .ನೀರಿನ ಹರಿವು ಜಾಸ್ತಿ ಇರುವುದರಿಂದ ಕಾರ್ಯಚರಣೆಗೆ ಅಡಚಣೆಯಾಗಿತ್ತು.
ಸ್ಥಳದಲ್ಲಿ ಪೋಲಿಸರು ಬೀಡು ಬಿಟ್ಡಿದ್ದಾರೆ.

Leave a Comment