ದಿನಗೂಲಿ ನೌಕರರ ನೇಮಕಾತಿ: ಅಕ್ರಮ ಆರೋಪ

ರಾಯಚೂರು.ಅ.12- ದಿನಗೂಲಿ ನೌಕರರ ಸೇವಾ ಸಕ್ರಮಾತಿ ಹೆಸರಿನಲ್ಲಿ ಅಕ್ರಮ ನೇಮಕಾತಿಯಿಂದ ನೂರು ಜನ ಗುತ್ತಿಗೆ ಪೌರಕಾರ್ಮಿಕರ ಜೀವನ ಬೀದಿ ಪಾಲಾಗುವುದನ್ನು ತಡೆದು ಯೋಜನಾ ನಿರ್ದೇಶಕರ ಮತ್ತು ಪೌರಾಯುಕ್ತರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಾಸೇನಾ ಒತ್ತಾಯಿಸಿದರು.
ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, 2017 ರ ಅವಧಿಯ ದಿನಗೂಲಿ ಕಾರ್ಮಿಕರನ್ನು ಖಾಯಂಗೊಳಿಸುವ ನೆಪದಲ್ಲಿ ಜಿಲ್ಲಾಧಿಕಾರಿಗಳು ನಕಲಿ ಪೌರ ಕಾರ್ಮಿಕರನ್ನು ಸೃಷ್ಟಿ ಮಾಡಿದ ಆದೇಶ ರದ್ದುಗೊಳಿಸಬೇಕು. ಗುತ್ತಿಗೆ ಪೌರ ಕಾರ್ಮಿಕರು ( ಸಫಾಯಿ ಕರ್ಮಚಾರಿ) ಮರಣ ಹೊಂದಿದರೆ, ಮೃತರ ಕೆಲಸ ಮೃತರ ಕುಟುಂಬದ ಸದಸ್ಯರಿಗೆ ನೀಡಬೇಕು. ಶವ ಸಂಸ್ಕಾರಕ್ಕೆ 5 ಸಾವಿರ ರೂ. ನ್ನು ನೀಡಬೇಕೆಂದು ಆಗ್ರಹಿಸಿದರು.
ನಗರಸಭೆ ಸ್ಯಾನಿಟೇಶನ್ ವಿಭಾಗದಲ್ಲಿ 20 ಜನ ಕೆಲಸ ಮಾಡದೇ ತಿಂಗಳ ವೇತನ ಪಡೆಯುತ್ತಿರುವುದನ್ನು ನಿಲ್ಲಿಸಿ, ಅವರ ಜಾಗದಲ್ಲಿ ಹಿಂದೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ ಪೌರ ಕಾರ್ಮಿಕರನ್ನು ಮತ್ತು ವಾಹನ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಕಳೆದ 1 ವರ್ಷದಿಂದ ನಗರಸಭೆ ಗಮನಕ್ಕೆ ತಂದರೂ, ಇಲ್ಲಿವರೆಗೆ ಯಾರ ಮೇಲೆ ಕ್ರಮ ಕೈಗೊಂಡಿಲ್ಲವೆಂತು ಹೇಳಿದರು.
ಪೌರಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ, ಅಧಿಕಾರಿಗಳ ವಿರುದ್ಧ ವಿಚಾರಣೆ ನ‌ಡೆಸಿ, ಸೂಕ್ತ ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ ವಕೀಲರು, ಉಪಾಧ್ಯಕ್ಷ ಉರುಕುಂದಪ್ಪ ಇದ್ದರು.

Leave a Comment