ದಿನಗೂಲಿ ನೌಕರರಿಂದ ಪ್ರತಿಭಟನೆ

ಮೈಸೂರು:ಮಾ.20- ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಆಶ್ರಯದಲ್ಲಿ ಮುಂಗಡಪತ್ರ ಅಧಿವೇಶನ ನಡೆದ ಅವಧಿಯಲ್ಲಿ ತಮ್ಮ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿತ್ತು.
ಧರಣಿಯಲ್ಲಿ ಪಾಲ್ಗೊಂಡ ಪ್ರತಿಭಟನಾ ನಿರತರು ಮಾತನಾಡಿ ಗುತ್ತಿಗೆ ನೌಕರರಿಗೆ ಖಾಯಂ ನೌಕರರಿಗೆ ಅನ್ವಯವಾಗುವ ಸಮಾನ ವೇತನ ನೀಡಬೇಕು. ಅವರನ್ನು ಅವರು ಕೆಲಸ ಮಾಡುವ ಹುದ್ದೆಗಳಲ್ಲೇ ಖಾಯಂ ಮಾಡಬೇಕು. ಇವರ ಜಾಗಗಳಿಗೆ ಹೊಸಬರನ್ನು ಕೆಲಸಕ್ಕೆ ಭರ್ತಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಗುತ್ತಿಗೆ ನೌಕರರು, ದಿನಗೂಲಿ ನೌಕರರು, ಖಾಯಂಗೊಂಡ ನೌಕರರು, ನಿವೃತ್ತಿಯಾದ ಖಾಯಂಗೊಂಡ ನೌಕರರು ಪಾಲ್ಗೊಂಡಿದ್ದರು.

Leave a Comment