ದಿನಗಳು ನೂರು.. ಸಿಎಂ ಕಣ್ಣೀರು ಅಭಿವೃದ್ಧಿಗೆ ಎಳ್ಳು ನೀರು ಬಿಜೆಪಿ ಟೀಕೆ

ಬೆಂಗಳೂರು, ಆ.೩೦- ದಿನಗಳು ನೂರು… ಹೋದಲ್ಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳು ನೀರು. ಇದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ವಿರೋಧ ಪಕ್ಷ ಬಿಜೆಪಿ ಟಾಂಗ್ ನೀಡಿರುವ ಪರಿ…
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇಂದಿಗೆ ನೂರು ದಿನ ಪೂರೈಸಿದೆ. ಅನೇಕ ಏಳು-ಬೀಳುಗಳ ಕಂಡು ಅಧಿಕಾರ ನಡೆಸುತ್ತಿರುವ ರಾಜ್ಯ ದೋಸ್ತಿ ಸರ್ಕಾರಕ್ಕೆ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಕಾಲೆಳೆದಿದೆ.
ಅಪವಿತ್ರ ಮೈತ್ರಿ, ಭಿನ್ನಮತಗಳ ನಡುವೆ ಮೈತ್ರಿ ಸರ್ಕಾರ 100 ದಿನ ಪೂರೈಸಿದೆ. ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ಸ್ಥಗಿತಗೊಂಡಿರುವ ಕಾಮಗಾರಿಗಳು ಚಾಲನೆಗೊಳ್ಳಲಿ ಎಂದು ಹಾರೈಸುತ್ತೇವೆ ಎಂದು ಬಿಜೆಪಿ ಹಾರೈಸಿದೆ.
ಹಾಗೆಯೇ, ದಿನಗಳು ನೂರು, ಹೋದಲ್ಲೆಲ್ಲಾ ಕಣ್ಣೀರು, ಅಭಿವೃದ್ಧಿಗೆ ಎಳ್ಳು ನೀರು ! ಮಾನ್ಯ ಕುಮಾರಸ್ವಾಮಿ ಅವರೇ ಇನ್ನಾದರೂ ನಿಮ್ಮ ಸರ್ಕಾರ ಟೇಕ್ ಆಫ್ ಆಗಲಿ, ನಿಂತು ಹೋಗಿರುವ ರಾಜ್ಯದ ಅಭಿವೃದ್ಧಿಗೆ ಚಾಲನೆ ಸಿಗಲಿ ಎಂದು ಹಾರೈಸುತ್ತೇವೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Leave a Comment