ದಿಢೀರ್ ಶ್ರೀಮಂತನಾಗಲು ೩೦ ಜನರ ಕೊಂದ ಟೈಲರ್ ಈಗ ಪೊಲೀಸರ ಅತಿಥಿ

ನವದೆಹಲಿ, ಸೆ ೧೦- ಇದು ಪೊಲೀಸ್ ಇಲಾಖೆಯನ್ನೆ ಬೆಚ್ಚಿ ಬೀಳಿಸುವ ಪ್ರಕರಣ. ವೃತ್ತಿಯಲ್ಲಿ ಟೈಲರ್ ಆಗಿರುವ ಅದೇಶ್ ಕಂಬಾರನಿಗೆ ಶ್ರೀಮಂತನಾಗಬೇಕೆಂಬ ಹಂಬಲ.ಅದಕ್ಕಾಗಿ ಈತ ೩೦ ಟ್ರಕ್ ಚಾಲರನ್ನು ಕೊಲೆ ಮಾಡಿದ್ದಾನೆ. ಕಳೆದ ಎಂಟು ವರ್ಷಗಳಲ್ಲಿ  ಈ ರೀತಿ ಸರಣಿ ಹತ್ಯೆಗಳನ್ನು ಹಣಕ್ಕಾಗಿಯೇ ಮಾಡಿದ್ದಾ. ಇಂತಹ ಭಯಾನಕ ಅಪರಾಧ ಎಸಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
೪೮ ವರ್ಷದ ಕಂಬಾರ ೧೨ ಅಂತರ ರಾಜ್ಯಗಳ ಗ್ಯಾಂಗ್ ಜೊತೆ ಸಂಪರ್ಕ ಬೆಳೆಸಿಕೊಂಡು ೩೦ ಸರಣಿ ಹತ್ಯೆಗಳನ್ನು ಮಾಡಿದ್ದಾನೆ ಎಂದರೆ ಯಾರನ್ನಾದರು ಬೆಚ್ಚಿಬೀಳಿದೆ ಇರದು. ಗುತ್ತಿಗೆ ಆಧಾರದ ಮೇಲೆ ಹೂಸಾಂಗಾಬಾದ್‌ನಲ್ಲಿ ಕೊಲೆ ಮಾಡಿದ್ದೇನೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇಷ್ಟೊಂದು ಸರಣಿ ಹತ್ಯೆ ಮಾಡಿದ್ದರೂ ಪೊಲೀಸರಿಗೆ ಬೇಕಾದ ಪಟ್ಟಿಯಲ್ಲಿ ಈ ಆರೋಪಿಯ ಹೆಸರೇ ಇಲ್ಲದಿರುವುದು ಸೋಜಿಗಕ್ಕೂ ಕಾರಣವಾಗಿದೆ.
ಕಂಬಾರ ಮತ್ತು ಈತನ ಸಹಚರರಾದ ಜೈ ಕಿರಣ್ ಪ್ರಜಾಪತಿ, ತುಕಾರಾಂ ಬಂಜಾರಾನನ್ನು ಪೊಲೀಸರು ಭೋಪಾಲ್ ನಲ್ಲಿ ಬಂಧಿಸಿದ್ದಾರೆ.
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ  ಕೊಲೆ ಪಾತಕಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದಾಗ  ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಘಡ ಮತ್ತು ಒಡಿಶಾ ರಾಜ್ಯಗಳಲ್ಲಿ ೩೦ ಕೊಲೆಗಳನ್ನು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ವಿಚಿತ್ರವೆಂದರೆ ಈ ಸರಣಿ ಕೊಲೆ ಪ್ರಕರಣಗಳಲ್ಲಿ ತಾನು ಶಾಮೀಲಾಗಿದ್ದೇನೆ ಎಂಬುದೇ ಆರೋಪಿಗೆ ಗೊತ್ತಿಲ್ಲವಂತೆ. ಈತನ ಕ್ರೌರ್ಯ ಹೇಗಿತ್ತು ಎಂಬುದನ್ನು ಊಹಿಸವುದು ಅಸಾಧ್ಯ. ಮಧ್ಯಪ್ರದೇಶದಲ್ಲಿ ೧೫, ಮಹಾರಾಷ್ಟ್ರದಲ್ಲಿ ೮, ಛತ್ತೀಸ್‌ಘಡದಲ್ಲಿ ೫ ಹಾಗೂ ಒಡಿಶಾದಲ್ಲಿ ಎರಡು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ಡ್ರೈವರ್ ಮತ್ತು ಕ್ಲೀನರ್ ಗಳ  ಸರಣಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೋಪಾಲ್ ಪೊಲೀಸರನ್ನು ಉತ್ತರ ಪ್ರದೇಶ ರಾಜ್ಯಗಳಿಗೆ ಪೊಲೀಸರನ್ನು ರವಾನಿಸಲಾಗಿದೆ. ಪ್ರತಿಯೊಂದು ಕೊಲೆಗೆ ತಲಾ ೫೦ ಸಾವಿರ ರೂ ಪಡೆದು ಈ ರೀತಿಯ ಸರಣಿ ಕೊಲೆಗಳನ್ನು ಮಾಡುತ್ತಿದ್ದನು. ಹಣ ಮಾಡುವ ಉದ್ದೇಶದಿಂದಲೇ ಗ್ಯಾಂಗ್ ಸೇರಿಕೊಂಡನು. ಕೆಲ ವರ್ಷಗಳ ಹಿಂದೆ ತಮ್ಮ ಪುತ್ರನಿಗೆ ಅಪಘಾತವಾಗಿದೆ ಆತನ ಚಿಕಿತ್ಸೆಗೆ ಸಾಲ ಪಡೆಡಿದ್ದನು.  ಈ ಹಣವನ್ನು ತೀರಿಸಲು  ಸರಣಿ ಹತ್ಯೆಗಳನ್ನು ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಲೋಧಾ ತಿಳಿಸಿದ್ದಾರೆ.
ಈ ಹಂತಕ ಕೇವಲ ಟ್ರಕ್ ಡ್ರೈವರ್ ಮತ್ತು ಕ್ಲೀನರ್ ಗಳನ್ನು  ಗುರಿಯಾಗಿರಿಕಿಕೊಂಡಿರಲಿಲ್ಲ. ಗುತ್ತಿಗೆದಾರನೊಬ್ಬರಿಂದ ೨೫ ಸಾವಿರ ಹಣ ಪಡೆದು ವ್ಯಕ್ತಿಯನ್ನು ಹತ್ಯೆ ಮಾಡಿದ್ದನೆಂದು ಅವರು ವಿವರಿಸುತ್ತಾರೆ.
ಈ ಕ್ರೂರಿ ಅತ್ಯಂತ ಸಂಘಟಿತ ಮತ್ತು ಬುದ್ಧಿವಂತಿಕೆಯಿಂದ ಸರಣಿ ಹತ್ಯೆಗಳನ್ನು ಮಾಡಿದ್ದಾನೆಂದರೆ, ಮೊಬೈಲ್ ಮತ್ತು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದನು. ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿ ೫೦ ಸಿಮ್ ಕಾರ್ಡ್ ಹಾಗೂ ೪೫ ಮೊಬೈಲ್ ಫೋನ್‌ಗಳನ್ನು ಬದಲಾಯಿಸಿದ್ದಾನೆ ಈ ಭೂಪ.
ಮಂಡೀದೀಪ್ ನ ಶಾಂತಿ ಎಂಬ ಪ್ರದೇಶದಲ್ಲಿ ವಾಸವಾಗಿ ಟೈಲರ್ ಆಗಿದ್ದುಕೊಂಡು ದಿಢೀರ್ ಶ್ರೀಮಂತನಾಗಲು ಸರಣಿ ಕೊಲೆಗಳನ್ನು ಮಾಡಿ ಈಗ ಖಾಕಿ ಪಡೆ ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾನೆ.

Leave a Comment