ದಿಢೀರ್ ತೂಕ ಇಳಿಕೆ ಕಾಯಿಲೆಯ ಸುಳಿವು

ದಪ್ಪಗಿರುವವರು ಸದಾ ಸಣ್ಣಗಾಗಲು ಬಯಸುತ್ತಾರೆ. ಜಗತ್ತಿನ ಬಹುತೇಕ ಮಂದಿ ತಮ್ಮ ತೂಕವನ್ನು ಆದಷ್ಟು ಕಡಿಮೆ ಮಾಡಿಕೊಂಡು ಸುಪೂರವಾಗಿರಲು ಬಯಸುವುದು ಸಹಜ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕೆಲವರು ಆಹಾರ ಪಥ್ಯ, ಮತ್ತೆ ಕೆಲವರು ವ್ಯಾಯಾಮ ಹೀಗೆ ನಾನಾ ರೀತಿ ಪ್ರಯತ್ನಗಳನ್ನು ನಡೆಸುವುದು ಸಹಜ.

ದೇಹದ ತೂಕ ಯಾವುದೇ ವ್ಯಾಯಾಮವಾಗಲೀ, ಆಹಾರ ಪಥ್ಯವಾಗಲೀ ಇಲ್ಲದೆ ಕಡಿಮೆಯಾಗುತ್ತಿದ್ದರೆ ಅದು ಅನಾರೋಗ್ಯ ಇರಬಹುದು. ಹಾಗಾಗಿ ದಿಢೀರೆಂದು ಭಾರೀ ಪ್ರಮಾಣದಲ್ಲಿ ತೂಕ ಕಡಿಮೆಯಾದರೆ ವೈದ್ಯರನ್ನು ಭೇಟಿ ಮಾಡುವುದು ಅತೀ ಅಗತ್ಯ.

health-we

ಯಾವುದೇ ವ್ಯಾಯಾಮ ಇಲ್ಲದೆ, ಡಯಟ್ ಇಲ್ಲದೆ ಕಡಿಮೆ ಅವಧಿಯಲ್ಲಿ ದೇಹದ ತೂಕ ಕಡಿಮೆಯಾದರೆ ಅದು ಆರೋಗ್ಯಕರ ಲಕ್ಷಣವಲ್ಲ.

ಯಾವುದೋ ಕಾಯಿಲೆ ಅಥವಾ ಸೋಂಕು ಇರಬಹುದು. ಆ ಕಾರಣದಿಂದ ತೂಕ ಕಡಿಮೆಯಾದರೆ ವೈದ್ಯರನ್ನು ಭೇಟಿ ಮಾಡಿ ತಪಾಸಣೆಗೆ ಒಳಗಾಗುವುದು ಅತಿ ಅವಶ್ಯ.

ಥೈರಾಯಿಡ್ ಸಮಸ್ಯೆ ಇದ್ದರೆ ಶೀಘ್ರ ತೂಕ ಇಳಿಕೆಗೆ ಕಾರಣವಾಗುತ್ತದೆ. ಧೈರಾಯಿಡ್ ಸಮಸ್ಯೆ ಲಕ್ಷಣಗಳು ಗೋಚರಿಸದೇ ಇದ್ದರೂ ತೂಕ ಕಡಿಮೆಯಾಗುವುದು ಥೈರಾಯಿಡ್‌ನ ಒಂದು ಲಕ್ಷಣ.

ಹಾಗಾಗಿ ತೂಕ ಕಡಿಮೆಯಾದರೆ ಥೈರಾಯಿಡ್ ಸಮಸ್ಯೆ ಇದೆಯೇ ಎಂಬುದನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು.

ಕರುಳಿಗೆ ಸಂಬಂಧಿಸಿದ ಕಾಯಿಲೆ ಇದ್ದರೂ ತೂಕ ಇಳಿಕೆ ಕಂಡು ಬರುತ್ತದೆ.

ಕರುಳಿನ ಕಾಯಿಲೆ ಇದ್ದರೆ ಆಹಾರದಲ್ಲಿನ ಗ್ರೂಟೇನ್ ಪ್ರಮಾಣವನ್ನು ಜೀರ್ಣಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಹಾಗಾಗಿ ಅವರ ತೂಕ ಇಳಿಯಬಹುದು.

ಮಧುಮೇಹದಿಂದ ಬಳಲುತ್ತಿರುವವರು ಸಹ ತೂಕ ಕಡಿಮೆಯಾಗುತ್ತದೆ. ಹಾಗಾಗಿ ದೇಹದ ತೂಕ ಸ್ವಯಂ ಪ್ರಯತ್ನಗಳಿಲ್ಲದೆ ಕಡಿಮೆಯಾದರೆ ಎಚ್ಚರ ವಹಿಸುವುದು ಒಳ್ಳೆಯದು.

ಕ್ಯಾನ್ಸರ್ ಸೇರಿದಂತೆ ಹೊಟ್ಟೆಯಲ್ಲಿರುವ ಗೆಡ್ಡೆ, ಕರುಳಿನ ಒಳಪದರಗಳಲ್ಲಿ ಉಣ್ಣು ಆದರೂ ತೂಕ ಕಡಿಮೆಯಾಗುತ್ತದೆ. ಹಾಗಾಗಿ ದಿಢೀರೆಂದು ದೊಡ್ಡ ಪ್ರಮಾಣದಲ್ಲಿ ತೂಕ ಕಡಿಮೆಯಾದರೆ ವೈದ್ಯರನ್ನು ಭೇಟಿ ಮಾಡಿ ಯಾವ ರೋಗ ಇದೆ ಎಂಬುದನ್ನು ಪತ್ತೆ ಮಾಡಿಕೊಂಡು ಚಿಕಿತ್ಸೆ ಪಡೆದರೆ
ರೋಗ ಮುಕ್ತರಾಗಲು ಸುಲಭವಾಗುತ್ತದೆ.

Leave a Comment