ದಿಗ್ಗಜರ ನರ್ತನ ಅಭಿಮಾನಿಗಳು ಫುಲ್ ಖುಷ್

ಬಾಲಿವುಡ್‌ನಲ್ಲಿ ಟ್ರೇಲರ್ ಮೂಲಕ ಗಮನ ಸೆಳೆದಿರುವ  ‘ಥಗ್ಸ್ ಆಫ್ ಹಿಂದೂಸ್ಥಾನ್ ಚಿತ್ರ ಭಾರಿ ನಿರೀಕ್ಷೆ ಹುಟ್ಟು ಹಾಕಿರುವುದು ಸತ್ಯ. ಇನ್ನು ಈ ಚಿತ್ರದ ವಶ್‌ಮಲ್ಲೆ ಹಾಡಿಗಾಗಿ ಮೊದಲ ಬಾರಿಗೆ ಜೊತೆಯಾಗಿ  ಅಮಿತಾಭ್ ಬಚ್ಚನ್ ಮತ್ತು ಅಮೀರ್‌ಖಾನ್ ನರ್ತಿಸಿದ್ದು, ಪ್ರೇಕ್ಷಕರಿಗೆ ಹಬ್ಬದೂಟ ಗ್ಯಾರಂಟಿ ಎನ್ನುತ್ತಿದೆ ಬಿಟೌನ್. ದಂತ ಕಥೆಗಳೆನಿಸಿದ ಈ ಇಬ್ಬರು ನಟರು ಮದ್ಯಪಾನದ ಮತ್ತಿನಲ್ಲಿ ತಮ್ಮ ಮನಸ್ಸು ಬಿಚ್ಚಿ ನರ್ತಿಸುವುದನ್ನು ಪ್ರೇಕ್ಷಕರು ಕಾಣಲಿದ್ದು, ಈ ಮೋಜಿನ ನೃತ್ಯ ಹೊಂದಿರುವ ಹಾಡನ್ನು ಸುಪ್ರಸಿದ್ದ ನೃತ್ಯ  ನಿರ್ದೇಶಕ ಪ್ರಭುದೇವ ನಿರ್ದೇಶಿಸಿರುವುದೇ ವಿಶೇಷ.

ಹಲವು  ವರ್ಷಗಳಲ್ಲಿ  ಅತ್ಯಂತ  ದೊಡ್ಡದಾದ ಚಲನಚಿತ್ರ ಎನಿಸಿರುವ ಯಶ್ ರಾಜ್ ಫಿಲಮ್ಸ್‌ನ ಮೆಗಾ ಸಾಹಸ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ಥಾನ್‌ನ ಟ್ರೇಲರ್ ತನ್ನ ಬೃಹತ್ ಗಾತ್ರ ಮತ್ತು ವೈಭವದಿಂದಾಗಿ ವಿಶ್ವವ್ಯಾಪಿಯಾಗಿ ಪ್ರೇಕ್ಷಕರನ್ನು ಬೆರಗಾಗಿಸಿದೆ. ಈ ಮೆಗಾ ಯುದ್ಧ ಮತ್ತು ಸಾಗರದ ನಡುವಿನ ಸಾಹಸಗಳನ್ನೊಳಗೊಂಡ ಭರ್ಜರಿ ದೃಶ್ಯಾನುಭವ ಒಳಗೊಂಡ ಚಲನಚಿತ್ರ ಈ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ.

ಹಲವು ವರ್ಷಗಳಲ್ಲಿ ಅತ್ಯಂತ ದೊಡ್ಡದಾದ ಚಲನಚಿತ್ರ ಎನಿಸಿರುವ ಯಶ್ ರಾಜ್ ಫಿಲಮ್ಸ್‌ನ ಮೆಗಾ ಸಾಹಸ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ಥಾನ್‌ನ ಟ್ರೇಲರ್ ತನ್ನ ಬೃಹತ್ ಗಾತ್ರ ಮತ್ತು ವೈಭವದಿಂದಾಗಿ ವಿಶ್ವವ್ಯಾಪಿಯಾಗಿ ಪ್ರೇಕ್ಷಕರನ್ನು ಬೆರಗಾಗಿಸಿದೆ. ಈ ಮೆಗಾ ಯುದ್ಧ ಮತ್ತು ಸಾಗರದ ನಡುವಿನ ಸಾಹಸಗಳನ್ನೊಳಗೊಂಡ ಭರ್ಜರಿ ದೃಶ್ಯಾನುಭವ ಒಳಗೊಂಡ ಚಲನಚಿತ್ರ ಈ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ. ದೊಡ್ಡ ತೆರೆಯಲ್ಲಿ ಮೊದಲ ಬಾರಿಗೆ ಬಾಲಿವುಡ್‌ನ ದೊಡ್ಡ ತಾರೆಗಳಾದ ಅಮಿತಾಬ್ ಬಚ್ಚನ್ ಮತ್ತು ಅಮೀರ್‌ಖಾನ್ ಅವರನ್ನು ಜೊತೆಗೂಡಿಸುವುದರೊಂದಿಗೆ ಈ ಚಲನಚಿತ್ರ ನಂಬಲಾಗದ ಈ ಪೀಳಿಗೆಯ ಕ್ರಾಂತಿ ಉಂಟು ಮಾಡಿದೆ.  ಇದನ್ನು ಮತ್ತಷ್ಟು ಆಸಕ್ತಿಕರ ಮತ್ತು ಆಕರ್ಷಕವಾಗಿಸಲು ಈ ಚಲನಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನೃತ್ಯ ಮಾಡಿದ್ದಾರೆ.

ಪ್ರತಿ ಬಾರಿ ಪ್ರತ್ಯೇಕವಾದ ಗುಣಮಟ್ಟ ಮಾನದಂಡವನ್ನು ಸ್ಥಾಪಿಸುವ ನೃತ್ಯ ನಿರ್ದೇಶನ ಮಾಡುವ ಪ್ರಭುದೇವ ಅವರು ಈ ಹಾಡನ್ನು ಹೊಸತನದಲ್ಲಿ ನಿರ್ದೇಶಿಸಿದ್ದಾರೆ, ವಶ್‌ಮಲ್ಲೆ(ಇದರ ಅರ್ಥ ನಿಮ್ಮ ಮನಸ್ಸು ಬಿಚ್ಚಿ ನರ್ತಿಸಿ, ಆನಂದಿಸಿ ಎಂದಾಗುತ್ತದೆ.)ಪ್ರಭುದೇವ ತಮ್ಮ ಉನ್ನತ ಶಕ್ತಿ ಮತ್ತು  ಉತ್ಸಾಹಗಳೊಂದಿಗೆ ಅನನ್ಯವಾದ ನೃತ್ಯ ಶೈಲಿಯೊಂದಿಗೆ ತಾವು ನಿರ್ದೇಶಿಸಿದ ಹಾಡುಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾರೆ. ಈ ಚಲನಚಿತ್ರದ ಹಾಡಿನಲ್ಲಿ ಅಮಿತಾಬ್ ಬಚ್ಚನ್  ಮತ್ತು ಅಮೀರ್‌ಖಾನ್ ಇಬ್ಬರೂ ಮನಸ್ಸು ಬಿಚ್ಚಿ, ಹೃದಯ ತುಂಬಿ ನರ್ತಿಸುವುದರಿಂದ ವಶ್‌ಮಲ್ಲೆ ಕೂಡ ಪ್ರತ್ಯೇಕವಾಗಿ ನಿಲ್ಲಲಿದೆ.

ಭಾರತ ಚಲನಚಿತ್ರದ ಇಬ್ಬರು ದಿಗ್ಗಜರು ಒಂದಾಗಿ ಕುಣಿಯುವುದನ್ನು ಕಾಣಲಿರುವ ಚಲನಚಿತ್ರದ ಕ್ಷಣಕ್ಕಾಗಿ ಸೂಕ್ತವಾದ ಬರಹ ಬರೆಯಲು ನಮಗೆ ಸಾಧ್ಯವಾಗಿದ್ದು ಅಚ್ಚರಿಯ ವಿಷಯವಲ್ಲದೆ, ಇವರಲ್ಲಿ ಇರುವ ಇತರರನ್ನು ಸೆಳೆಯುವಂತಹ ಶಕ್ತಿ ಮತ್ತು ಜೊತೆಗಾರಿಕೆಯಿಂದಾಗಿ ಈ ಹಾಡು ಪ್ರತ್ಯೇಕವಾಗಿ ನಿಲ್ಲಲಿದೆ. ಈ ಹಾಡು ಬಚ್ಚನ್  ಮತ್ತು ಅಮೀರ್‌ಖಾನ್ ಅವರು ಸಂಭ್ರಮದ ಆಚರಣೆಯಲ್ಲಿರುವುದನ್ನು ಸಾದರಪಡಿಸುತ್ತದೆ. ಈ ಸಂಭ್ರಮದ ಆಚರಣೆಯಲ್ಲಿ ಮದ್ಯಪಾನ ಮಾಡಿ ಮತ್ತಿನಲ್ಲಿ ಅವರು ನರ್ತಿಸುವುದನ್ನು ಈ ಉನ್ನತ ಉತ್ಸಾಹದ ಹಾಡಿನ ದೃಶ್ಯ ತೋರಿಸಲಿದೆ. ಥಗ್ಸ್ ಆಫ್ ಹಿಂದೂಸ್ತಾನ್‌ಗಾಗಿ ನಾವು ಹಿಡಿದಿಟ್ಟ ಅಮೂಲ್ಯ ಕ್ಷಣ ಇದಾಗಲಿದೆ ಎಂದು ನಿರ್ದೇಶಕ ವಿಜಯ್ ಕೃಷ್ಣ ಆಚಾರ್‍ಯ ತಿಳಿಸಿದ್ದಾರೆ. ತಮಿಳಿನಲ್ಲಿ ಈ ಬಹುನಿರೀಕ್ಷಿತ ಹಾಡನ್ನು ದಿವ್ಯಾಕುಮಾರ್ ಮತ್ತು ನಕಾಶ್ ಅಜೀಜ್ ಅವರು ಹಾಡಿದ್ದು, ಖ್ಯಾತ ಸಾಹಿತಿ ಮದನ್ ಖರ್ಕಿ ಅವರು ಅತ್ಯುತ್ತಮ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜಕರಾದ ಅಜಯ್-ಅತುಲ್ ಈ ಹಾಡನ್ನು ಸೃಷ್ಟಿಸಿದ್ದಾರೆ.

ಥಗ್ಸ್ ಆಫ್ ಹಿಂದೂಸ್ತಾನ್ ಚಲನಚಿತ್ರದಲ್ಲಿ ತಾರೆಯರಾದ ಕತ್ರಿನಾಕೈಫ್ ಮತ್ತು ಫಾತೀಮಾ ಸನಾ ಶೇಖ್ ಅವರು ಕೂಡ ನಟಿಸಿದ್ದಾರೆ. ಇದುವರೆಗೆ ಕಂಡಿರುವಂತಹ ಅತ್ಯಂತ ದೊಡ್ಡದಾದ ಮತ್ತು ಬೆರಗುಗೊಳಿಸುವಂತಹ ಸಾಹಸ ದೃಶ್ಯಗಳನ್ನು ಬೆಳ್ಳಿ ತೆರೆಯ ಮೇಲೆ ಸಾದರಪಡಿಸುವ ಈ ಚಲನಚಿತ್ರ ಭಾರತದ ಎಲ್ಲೆಡೆ ಪ್ರೇಕ್ಷಕರಿಗೆ ಔತಣ ನೀಡಲು ಸಜ್ಜಾಗಿದೆ. ಪ್ರೇಕ್ಷಕರನ್ನು ಆಸನದ ತುದಿಯಲ್ಲಿ ಕೂರಿಸುವಂತಹ ರೋಮಾಂಚಕಾರಿ ಕ್ಷಣಗಳನ್ನು ಮತ್ತು ತಲ್ಲೀನಗೊಳಿಸುವ ದೃಶ್ಯಾನುಭವಗಳ ಜೊತೆಗೆ ಯಶ್ ರಾಜ್ ಫಿಲ್ಮ್ಸ್‌ನ ಸಂಪೂರ್ಣ ಮನರಂಜನಾತ್ಮಕ ಚಲನಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್ ರಾಷ್ಟ್ರೀಯ ರಜೆ ದಿನವಾದ ನ ೮ರಂದು ಹಿಂದಿ, ತಮಿಳ್ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

Leave a Comment