ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ

ಧಾರವಾಡ,ನ16;-ಹು-ಧಾ ಮಹಾನಗರ ಪಾಲಿಕೆಯ ವಾರ್ಡ ನಂ 22 ರ ಸುತಗಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಸ ಶ್ರೇಷ್ಠರಾದ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸಿದ್ದಪ್ಪ ಕುಂಬಾರ ಅಧ್ಯಕ್ಷತೆವಹಿಸಿದ್ದರು, ಸದಸ್ಯರಾದ ಸೋಮಯ್ಯ ಮೂಕಶಿವಯ್ಯನವರ,ತಿಪ್ಪಣ್ಣ ಅಜ್ಯಾಳ, ನಿಂಗಪ್ಪ ಮಾದರ, ಚಂಬಣ್ಣಾ ಹಳವೂರ, ಬಸಪ್ಪ ಮಣ್ಣಪ್ಪನವರ,  ಲಕ್ಷ್ಮಿ ಕೊಟಬಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾಕೊಟದಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಮೈಸೂರಿನ ದಸರಾ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಗ್ಲಾಸ್ ಹೌಸದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಮೂರು ಮಕ್ಕಳಿಗೆ ಪ್ರಶಸ್ತಿ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶಿಕ್ಷಕಿಯಾದ  ಆಶಾ ಎ.ಮುನವಳ್ಳಿ,  ವಿದ್ಯಾ ಕುಲಕರ್ಣಿ ಇನ್ನಿತರರ ಉಪಸ್ಥಿತರಿದ್ದರು.

Leave a Comment