ದಾವೂದ್ ಇಬ್ರಾಹಿಂ ಸೋದರಳಿಯ ರಿಜ್ವಾನ್ ಕಸ್ಕರ್ ಬಂಧನ

ಮುಂಬೈ, ಜುಲೈ 18 – ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಅವರ ಸೋದರಳಿಯ ರಿಜ್ವಾನ್ ಕಸ್ಕರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಇಬ್ರಾಹಿಂ ಅವರ ಸಹೋದರ ಇಕ್ಬಾಲ್ ಕಸ್ಕರ್ ಅವರ ಪುತ್ರ ರಿಜ್ವಾನ್ ಕಸ್ಕರ್ ಅವರನ್ನು ಬುಧವಾರ ರಾತ್ರಿ ಇಲ್ಲಿನ ಚತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಎರಡು ದಿನಗಳ ಹಿಂದೆ, ಮುಂಬೈ ಪೊಲೀಸರ ಸುಲಿಗೆ-ವಿರೋಧಿ ದಳ ಇಬ್ರಾಹಿಂನ ತಂಡದ ಸದಸ್ಯ ಫಾಹಿಮ್ ಮಚ್ಮಾಚ್ ಅವರ ಆಪ್ತ ಸಹಾಯಕ ಅಹ್ಮದ್ ರಾಜಾ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ರಿಜ್ವಾನ್ ಅವರನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Comment