ದಾವಣಗೆರೆಯಲ್ಲಿ ಸಿದ್ದಗೊಂಡಿದೆ ಧರ್ಮಸ್ಥಳ ಮಾದರಿಯ ಮಂಟಪ

\ದಾವಣಗೆರೆ.ಸೆ.1; ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದ ಮಾದರಿಯಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಗಣೇಶೋತ್ಸವಕ್ಕಾಗಿ ಮಂಟಪ ಸಜ್ಜಾಗಿದೆ. ಕಳೆದೊಂದು ತಿಂಗಳಿನಿಂದಲೂ ಹಿಂದೂ ಮಹಾಸಭಾ ಟ್ರಸ್ಟ್‍ನಿಂದ ದ್ವಿತೀಯ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಮಂಟಪವು ಸುಮಾರು 45 ಅಡಿ ಎತ್ತರ, 160 ಅಡಿ ಅಗಲ, 120 ಅಡಿ ಉದ್ದದ ವಿಸ್ತೀರ್ಣದಲ್ಲಿ ಸಜ್ಜಾಗಿದೆ ಕೊಲ್ಕತ್ತಾದ ಕಲಾವಿದರು ಅತ್ಯಂತ ಸುಂದರವಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಾಲಯದ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿದ್ದಾರೆ.ನಾಳೆ ಗಣೇಶನನ್ನು ಪ್ರತಿಷ್ಠಾಪಿಸಿ ಸಕಲ ವಿಧಿ ವಿಧಾನಗಳಿಂದ ಪೂಜೆ ನೆರವೇರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ 15 ಅಡಿ ಎತ್ತರದ ಮಣ್ಣಿನ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ ಅಲ್ಲದೇ 10 ಅಡಿ ಎತ್ತರದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿ ಸಿದ್ದಗೊಂಡಿದೆ ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 6 ರಿಂದ ರಾತ್ರಿ 11 ರವರೆಗೆ ಮಂಜುನಾಥ ಸ್ವಾಮಿಯ ನೃತ್ಯ ರೂಪಕ ಪ್ರದರ್ಶನ ಆಯೋಜಿಸಲಾಗಿದೆ.
—————————————————————-
ಪಿಓಪಿ ಗಣೇಶನ ಮೂರ್ತಿಗಳು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು. 5 ಅಡಿಗಿಂತ ಮೇಲ್ಪಟ್ಟ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಬಗ್ಗೆ ಮೊದಲೆ ಅವಕಾಶ ಪಡೆದವರಿಗೆ ಅನುಮತಿ ನೀಡಲಾಗಿದೆ.
– ಪದ್ಮಾ ಬಸವಂತಪ್ಪ ಅಪರ ಜಿಲ್ಲಾಧಿಕಾರಿ ದಾವಣಗೆರೆ
———————————–
ಸಾರ್ವಜನಿಕರಿಗೆ ಉಚಿತ ಪ್ರವೇಶ
ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಮಾದರಿಯ ಮಂಟಪ ನಿರ್ಮಾಣವಾಗಿದೆ. 21 ದಿನದ ನಂತರ ವಿಜೃಂಭಣೆಯಿಂದ ನಗರದೆಲ್ಲೆಡೆ ಮೆರವಣಿಗೆ ನಡೆಸಿ ಗಣೇಶನನ್ನು ವಿಸರ್ಜನೆ ಮಾಡಲಾಗುವುದು.17 ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಯಕ್ಷಗಾನ,ನಾಟಕ ಹಾಗೂ ಮಜಾಭಾರತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ.ಕಳೆದ ಬಾರಿ ಅಸ್ಸಾಂನ ದೇವಾಲಯದ ರೂಪದಲ್ಲಿ ಮಂಟಪ ನಿರ್ಮಾಣ ಮಾಡಲಾಗಿತ್ತು.ಈ ಬಾರಿ ರಾಜ್ಯದಲ್ಲೇ ಪ್ರಥಮಬಾರಿಗೆ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜಿಲ್ಲಾಡಳಿತ 5 ಅಡಿಗಿಂತ ಎತ್ತರದ ಮೂರ್ತಿ ಪ್ರತಿಷ್ಠಾಪನೆ ಮಾಡಬಾರದು ಎಂದು ತಿಳಿಸಿದೆ.ಆದರೆ ನಾವು 4 ತಿಂಗಳ ಮೊದಲೇ ಗಣೇಶ ಮೂರ್ತಿ ತಯಾರಿಸಲು ಆರ್ಡರ್ ಕೊಟ್ಟಿದ್ದೆವು. ಜಿಲ್ಲಾಡಳಿತ ಹಬ್ಬದ ಒಂದುವಾರ ಮೊದಲು 5 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸದಂತೆ ಸೂಚನೆ ನೀಡಿದೆ.ಆದರೆ ನಾವು ಸಾಕಷ್ಠು ಹಣ ನೀಡಿ ಮೊದಲೇ ಗಣೇಶನ ಮೂರ್ತಿ ತಯಾರಿಕೆಗೆ ಆರ್ಡರ್ ಮಾಡಿದ್ದೇವೆ ಆದ್ದರಿಂದ ಅದೇ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದೇವೆ.ಮುಂದಿನ ಬಾರಿ ಮೊದಲೇ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ನಂತರ ಗಣೇಶನ ಮೂರ್ತಿ ತಯಾರಿಸಲು ಆರ್ಡರ್ ಮಾಡುತ್ತೇವೆ.
– ಜೊಳ್ಳಿ ಗುರು
ಅಧ್ಯಕ್ಷರು
ಹಿಂದೂಮಹಾ ಗಣಪತಿ ಟ್ರಸ್ಟ್

Leave a Comment