ದಾವಣಗೆರೆಯಲ್ಲಿ ಶ್ರೀ ಶಿವಪಾರ್ವತಿ ಕಲ್ಯಾಣ

ದಾವಣಗೆರೆ.ನ.22; ಖಾಸಗಿ ವಾಹಿನಿ ಟಿವಿ5 ಮೊಟ್ಟ ಮೊದಲ ಬಾರಿಗೆ ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ. ಇದೇ ನ.24 ರ ಸಂಜೆ 5 ಗಂಟೆಯಿಂದ ಹೈಸ್ಕೂಲ್ ಮೈದಾನದಲ್ಲಿ ಶ್ರೀ ಶಿವಪಾರ್ವತಿ ಕಲ್ಯಾಣೋತ್ಸವ ನಡೆಯಲಿದೆ ಎಂದು ವಾಹಿನಿಯ ಶ್ರೀನಿವಾಸ ಜೋಷಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಒಯಲ್ಲಿಮದು ಮಾತನಾಡಿದ ಅವರು ಕಲ್ಯಾಣೋತ್ಸವಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಕೈಲಾಸ ಪರ್ವತದ ಸೆಟ್ ಹಾಕಲಾಗಿದೆ. ಸುಮಾರು 50 ಸಾವಿರ ಭಕ್ತರು ಸೇರುವ ನೀರಿಕ್ಷೆ ಇದೆ ಎಂದರು. ಶ್ರೀ ಶಿವಪಾರ್ವತಿ ಕಲ್ಯಾಣ ಉತ್ಸವಕ್ಕೆ ವಿವಿಧ ಮಠಾಧೀಶರು ಆಗಮಿಸಿಲಿದ್ದಾರೆ. ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶಿವಪಾರ್ವತಿ ಕಲ್ಯಾಣ ಉತ್ಸವದಲ್ಲಿ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ
ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಡಾ.ನಿರ್ಮಲಾನಂದನಾಥ ಮಹಸ್ವಾಮಿಗಳು,ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ, ಕನ್ನಡ ಮಾಧ್ಯಮ ಇತಿಹಾಸದಲ್ಲೇ ಟಿವಿ5 ಹೊಸ ಸಂಚಲನ ಸೃಷ್ಟಿಸುತ್ತಿದೆ. ಅಂದು ಸಂಜೆ ಹೈಸ್ಕೂಲ್ ಮೈದಾನದಲ್ಲಿ ಕಲ್ಯಾಣೋತ್ಸವಕ್ಕೂ ಮುನ್ನ, ನಗರದ ಲಕ್ಷ್ಮೀ ಫ್ಲೋರ್‍ಮಿಲ್ ಬಳಿ ಇರುವ ಗಣೇಶ್ ದೇವಸ್ಥಾನದ ಬಳಿ ಶಿವ ಪಾರ್ವತಿಯರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆ ನಡೆಯಲಿದೆ. ಪೂಜೆ ಬಳಿಕ ಶಿವ ಪಾರ್ವತಿಯರ ಮೂರ್ತಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಶೋಭಾಯಾತ್ರೆ; ಶ್ರೀ ಶಿವಪಾರ್ವತಿ ಕಲ್ಯಾಣಕ್ಕೂ ಮುನ್ನ ಅತ್ಯಾದ್ಭುತ, ಮನಮೋಹಕ, ರೋಚಕವಾಗಿ ಶಿವ ಪಾರ್ವತಿಯರ ಶೋಭಾಯಾತ್ರೆ ನಡೆಯಲಿದೆ.. ತಾಳ-ಮೇಳ, ಮಂಗಳವಾದ್ಯ, ವೇದ ಮಂತ್ರಗಳ ಮಧ್ಯೆ ಶೋಭಾಯಾತ್ರೆ ನಡೆಯಲಿದೆ. ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಶಿವ ಪಾರ್ವತಿಯ ವಿಗ್ರಹಗಳ ಮೆರವಣಿಗೆ. ವಿವಿಧ ಕಲಾತಂಡಗಳು ಇದರಲ್ಲಿ ಭಾಗಿಯಾಗಲಿವೆ. ಅಘೋರ ನೃತ್ಯ, ಶಿವತಾಂಡವ, ಡೊಳ್ಳು ಕುಣಿತ, ನಂದಿ ಧ್ವಜ ಮಧ್ಯೆ ಸುಮಾರು 120 ಕ್ಕೂ ಹೆಚ್ಚು ಕಲಾ ತಂಡಗಳು, ಕಲಾವಿದರು ಮೆರವಣಿಯಲ್ಲಿ ಭಾಗವಹಿಸಲಿದ್ದಾರೆ. ಶಿವ ಪಾರ್ವತಿ ಕಲ್ಯಾಣೋತ್ಸವದ ಬಳಿಕ, ಒಂಭತ್ತು ವಿಧಧ ವಿಶೇಷ ದ್ರವ್ಯಗಳನ್ನು ಒಳಗೊಂಡ ಮಹಾ ಪ್ರಸಾದವನ್ನು ಉಚಿತವಾಗಿ ವಿತರಿಸಲಿದ್ದೇವೆ. ಶ್ರೀ ಕಾಶಿ ವಿಶ್ವನಾಥನ ಸನ್ನಿಧಿಯ ಅಮೃತ ಸಮಾನ ಪವಿತ್ರ ಗಂಗಾಜಲ, ನೇಪಾಳದ ಪಶುಪತಿನಾಥ ದೇಗುಲದ ವಿಶೇಷ ಶಕ್ತಿಯ ರುದ್ರಾಕ್ಷಿ, ಶಿವನ ಆತ್ಮಲಿಂಗ ಗೋಕರ್ಣದ ಮಹಾಬಲೇಶ್ವರ ದೇಗುಲದ ಲಾಡು, ರಾಮಚಂದ್ರಾಪುರ ಸಂಸ್ಥಾನದ ಮಂತ್ರಾಕ್ಷತೆ, ದೇವತಾ ಸ್ತ್ರೋತ್ರಗಳನ್ನ ಒಳಗೊಂಡ ಪುಸ್ತಕ, ಅರಿಶಿನ ಕುಂಕುಮ, ವಿಭೂತಿ ಸೇರಿ 9 ರೀತಿಯ ವಿಶೇಷ ಮಹಾ ಪ್ರಸಾದವನ್ನು ಉಚಿತವಾಗಿ ವಿತರಣೆ ಮಾಡಲಿದ್ದೇವೆಂದರು.
ಕಾರ್ಯಕ್ರಮದಲ್ಲಿ ಡಿಸಿಎಂಗಳಾದ ಲಕ್ಷ್ಮಣ ಸವದಿ, ಡಾ. ಅಶ್ವತ್ಥ್ ನಾರಾಯಣ, ಗೋವಿಂದ ಕಾರಜೋಳ, ದಾವಣಗೆರೆ ಉಸ್ತುವಾರಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್.ಅಶೋಕ್, ಸಿಸಿ ಪಾಟೀಲ್, ವಿ.ಸೋಮಣ್ಣ, ಪ್ರಭು ಚವ್ಹಾಣ್, ಕೋಟ ಶ್ರೀನಿವಾಸ ಪೂಜಾರಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಶಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಮಾಜಿ ಸಚಿವರಾದ ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್, ಮುರುಗೇಶ್ ನಿರಾಣಿ, ಎಂಬಿ.ಪಾಟೀಲ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಮೂತಿ, ಸತೀಶ್, ಸಿದ್ದೇಶ್,ಜೀವನ್,ಬಾಡಾದ ಪ್ರವೀಣ್ ಇದ್ದರು.

Leave a Comment