ದಾವಣಗೆರೆಯಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿಗಳ ಘರ್ಜನೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

ದಾವಣಗೆರೆ.ಅ.17; ನಗರದ ವಿವೇಕಾನಂದ ಬಡಾವಣೆಯಲ್ಲಿಂದು ಬೆಳಂಬೆಳಗ್ಗೆ ನಡೆದ ಜೆಸಿಬಿಗಳ ಘರ್ಜನೆಗೆ ನಾಗರೀಕರು ತತ್ತಗೊಂಡಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಿದ ಮನೆಗಳನ್ನು ಸ್ಮಾರ್ಟ್ ಸಿಟಿ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಇಂದು ನೆಲಸಮ ಮಾಡಿದ್ದಾರೆ. ಆದರೆ ಒತ್ತುವರಿದಾರರು ನಮಗೆ ಯಾವುದೇ ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ಮಾಡುತ್ತಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ಜರುಗಿತು. ಇಂದು ಬೆಳ್ಳಂಬೆಳಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಜೊತೆ ಜೊತೆಗೂಡಿ ರಾಜಕಾಲುವೆ ಒತ್ತುವರಿ ಜಾಗಗಳನ್ನು ತೆರವುಗೊಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಯಲ್ಲಿರುವ ರಾಜಕಾಲುವೆ ಗಳನ್ನು ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸಲಾಗುತ್ತದೆ.. ಅದರಂತೆ ಇಂದು ಕೂಡ ನಗರದ ವಿವೇಕಾನಂದ ಬಡಾವಣೆಯಲ್ಲಿ ಅಧಿಕಾರಿಗಳು ಹಾಗೂ ಇಂಜಿನಿಯರುಗಳ ಸಮ್ಮುಖದಲ್ಲಿ ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸಿದ್ದಾರೆ.ಅಲ್ಲದೆ ರಾಜಕಾಲುವೆಯ ಅಳತೆ ಮಾಡಿದರು. ಮಳೆ ಬಂದಂತಹ ಸಂದರ್ಭದಲ್ಲಿ ರಾಜಕಾಲುವೆ ಗಳಲ್ಲಿ ಸರಾಗವಾಗಿ ಮಳೆನೀರು ಹೋಗದ ಹಿನ್ನೆಲೆಯಲ್ಲಿ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಜಾಗಗಳನ್ನು ತೆರವುಗೊಳಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಯೋಜನೆ ಇಂಜಿನಿಯರ್ ತಿಳಿಸಿದ್ದಾರೆ.
ಇತ್ತ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ತೆರವು ಮಾಡುತ್ತಿದ್ದರೆ ಅತ್ತ ಸ್ಥಳೀಯರ ಆಕ್ರೋಶ ಮುಗಿಲುಮುಟ್ಟಿತ್ತು.ದೂಡ ಅಧಿಕಾರಿಗಳು ಅಳತೆ ಮಾಡಿದ ಜಾಗದಲ್ಲಿ ನಾವು ಮನೆಗಳನ್ನು ಕಟ್ಟಿಕೊಂಡಿದ್ದೇವೆ ಆದರೆ ಈಗ ಸ್ಮಾರ್ಟ್ ಸಿಟಿ ಅಧಿಕಾರಿಗಳು ಏಕಾಏಕಿ ನೋಟಿಸ್ ನೀಡದೆ ಮನೆಗಳನ್ನು ಹಾಗೂ ಕಾಂಪೌಂಡ್ ಗಳನ್ನು ತೆರವು ಮಾಡುತ್ತಿದ್ದಾರೆ ಯಾವುದೇ ಒಂದು ತೆರವು ಕಾರ್ಯಾಚರಣೆ ಮಾಡಬೇಕೆಂದರೆ ನೋಟೀಸ್ ನೀಡಲಾಗುತ್ತದೆ ಆದರೆ ಅಧಿಕಾರಿಗಳು ಮಾತ್ರ ಯಾವುದೇ ನೋಟಿಸ್ ನೀಡದೆ ತೆರವು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.ಆದರೆ ಅಧಿಕಾರಿಗಳು ಮಾತ್ರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು.
ಬಾಕ್ಸ್
ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ಅಂತಹ ನಿವೇಶನಗಳನ್ನು ತೆರವು ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಳೆ ನೀರು ಸರಾಗವಾಗಿ ಹರಿದುಹೊಗಲು ರಾಜಕಾಲುವೆ ಮಾರ್ಗದ ಕಾಮಗಾರಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ವಿವೇಕಾನಂದ ಬಡಾವಣೆಯಲ್ಲಿಂದು ರಾಜಕಾಲುವೆ ಗುರುತಿಸಿ ಅಳತೆ ಮಾಡಲಾಗುತ್ತಿದೆ. ಯಾವುದೇ ಕಟ್ಟಡ ತೆರವು ಮಾಡಿಲ್ಲ. ನಿವೇಶನಗಳಿಗೆ ಕಾಂಪೌಂಡ್ ಹಾಕಿದ ಕಡೆಗಳಲ್ಲಿ ಅಳತೆ ಮಾಡಿ ತೆರವು ಮಾಡಲಾಗಿದೆ.
– ರವಿ
ಅಸಿಸ್ಟೆಂಟ್ ಇಂಜಿನಿಯರ್
ಸ್ಮಾರ್ಟ್‍ಸಿಟಿ ಯೋಜನೆ
ದಾವಣಗೆರೆ.

Leave a Comment