ದಾಳಿ: ೩೦೦ ಕೆಜಿ ಪ್ಲಾಸ್ಟಿಕ್ ವಶ

ರಾಯಚೂರು.ಮಾ ೧೫- ನಗರದಲ್ಲಿಂದು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ವರ್ತಕರ ಅಂಗಡಿಗಳ ಮೇಲೆ ನಗರ ಸಭೆಯ ಅಧಿಕಾರಿಗಳು ದಾಳಿ ನಡೆಸಿದರು.
ನಗರದ ಸದರ್ ಬಜಾರ್, ಪಾಟೇಲ್ ರಸ್ತೆ ಸೇರಿದಂತೆ ಇನ್ನಿತರರ ಪ್ಲಾಸ್ಟಿಕ್ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು ೧ ಲಕ್ಷ.ರೂ ಮೌಲ್ಯದ ೩೦೦ ಕೆಜಿ ಪ್ಲಾಸ್ಟಿಕ್ ವಸ್ತು ಪಡಿಸಿಕೊಂಡು, ಅಂಗಡಿ ಮಾಲೀಕರಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಪರಿಸರ ಅಧಿಕಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment