ದಾರಿ ಹೋಕರನ್ನು ತಡೆದು ಹಣ ವಸೂಲಿ ಮಾಡದಿರಿ : ಎಸ್ಪಿ

ಕುಂದಗೋಳ ಸೆ6;   ಗಣೇಶ ವಿಸರ್ಜನೆಯಂದು ಧ್ವನಿವರ್ಧಕದಲ್ಲಿ ದೇಶಭಕ್ತಿ ಗೀತೆ ಅಥವಾ ಸಂಗೀತ ವಿದ್ವಾಂಸಕರ ಹಾಡುಗಳನ್ನು ಮಾತ್ರ ಭಿತ್ತರಿಸಬೇಕು ಹಾಗೂ ಅನಗತ್ಯವಾಗಿ ದಾರಿಪ್ರಯಾಣಿಕರನ್ನು ತಡೆದು ಒತ್ತಾಯದ ಹಣ ವಸೂಲಿ ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಎಸ್‍ಪಿ ಸಂಗೀತಾ ಜಿ. ಅವರು ಎಚ್ಚರಿಸಿದರು.
ಅಬರು ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಸಭಾ ಭವನದಲ್ಲಿ ಮಂಗಳವಾರ ಗಣೇಶ-ಮೊಹರಂ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತ ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಇಸ್ಪೀಟ್ ಸೇರಿದಂತೆ ಯಾವದೇ ಜೂಜಾಟ ಆಡಕೂಡದು. ಸಿಡಿಮದ್ದು ಹಾಗೂ ಧ್ವನಿವರ್ಧಕಗಳನ್ನು ದುರ್ಭಲ ರೋಗಿಗಳ ಮನೆಯ ಮುಂದೆ, ಯಾವದೇ ಕೋಮಿನ ಪೂಜಾ ಸ್ಥಳಗಳ ಮುಂದೆ ಅನಾವಶ್ಯಕವಾಗಿ ಬಳಸಬಾರದು. ಗಣೇಶ ವಿಸರ್ಜನೆಯನ್ನು ರಾತ್ರಿ 10:30ರೊಳಗೆ ಮಾಡಬೇಕು ಹಾಗೂ ಧ್ವನಿವರ್ಧಕಗಳನ್ನು 10 ಗಂಟೆ ನಂತರ ಉಪಯೋಗಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಿಪಿಐ ಟಿ.ವೆಂಕಟಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪಿಎಸ್‍ಐ ನವೀನ ಜಕ್ಕಲಿ, ಮುಖಂಡರಾದ ಸೋಮರಾವ ದೇಸಾಯಿ, ರಾಯೇಸಾಬ ಕಳ್ಳಿಮನಿ, ಗ್ರೇಡ್2 ತಹಶಿಲ್ದಾರ ವಿ.ಎ.ಮುಳಗುಂದಮಠ, ಪ.ಪಂ ಮುಖ್ಯಾಧಿಕಾರಿ ಎನ.ಕೆ.ಡೊಂಬರ ಅನೇಕರಿದ್ದರು.

Leave a Comment