ದಾನಿಗಳಿಂದ ಸಮಾಜಕ್ಕೆ ಸಹಕಾರ

ಹಿರಿಯೂರು.ಆ.16: ಸಮಾಜದಲ್ಲಿ ದಾನಿಗಳು ಮತ್ತೊಬ್ಬರಿಗೆ ನೀಡುವ ಸಹಕಾರ ತುಂಬಾ ಅಮೂಲ್ಯವಾದದ್ದು ಎಂದು ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷರಾದ ಸಪ್ನಾಸತೀಶ್ ಹೇಳಿದರು, ತಾಲ್ಲೂಕಿನ ಬೆಳಗಟ್ಟ ಸರ್ಕಾರಿ ಶಾಲೆಯ ಮಕ್ಕಳಿಗೆ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳಾದ ನಾರಾಯಣರೆಡ್ಡಿಯವರು ವಿದ್ಯಾರ್ಥಿಗಳಿಗೆ ನೀಡಿದ ಬೆಲ್ಟ್, ಟೈ, ಮತ್ತು ಐ.ಡಿ.ಕಾರ್ಡ್ ಗಳನ್ನು ವಿತರಿಸಿ ಅವರು ಮಾತನಾಡಿದರು. ನಾರಾಯಣ ರೆಡ್ಡಿಯವರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ವಂತ ಖರ್ಚಿನಿಂದ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು ಹಾಗೂ ಭವ್ಯ ಭಾರತ ದೇಶದ 72ನೇ ಸ್ವಾತಂತ್ರ್ಯೋತ್ಸವದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ದಾನಿಗಳಾದ ನಾರಾಯಣರೆಡ್ಡಿ, ಸ್ವರ್ಣಲತಾ, ರೋಟರಿ ಕ್ಲಬ್ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ, ಕಾರ್ಯದರ್ಶಿ ಹೆಚ್.ವೆಂಕಟೇಶ್, ಬಿ.ಕೆ.ನಾಗಣ್ಣ, ಎ.ರಾಘವೇಂದ್ರ, ಪದ್ಮಜಾ ಎಂ. ಶೆಟ್ಟ, ಸರ್ವಮಂಗಳರಮೇಶ್, ಮುಖ್ಯ ಶಿಕ್ಷಕರಾದ ಜಿ.ಸಿದ್ಧರಾಮಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯ್ಯಣ್ಣ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment