ದಾಖಲೆ ಮೊತ್ತಕ್ಕೆ ವರ್ಣಚಿತ್ರ ಹರಾಜು

ಇಟಲಿಯ ಲಿಯನಾರ್ಡೊ ಡಾ. ವಿಂಚಿ ವಿಶ್ವ ಕಂಡ ಶ್ರೇಷ್ಠ ಕಲಾವಿದ. ಈ ಮಹಾನ್ ವರ್ಣಚಿತ್ರಗಾರ ತನ್ನ ಕುಂಚದಲ್ಲಿ ಬಿಡಿಸಿದ ಮೊನಾಲಿಸಾ ಚಿತ್ರವಂತೂ ಎಲ್ಲರಿಗೂ ಅಚ್ಚುಮೆಚ್ಚು. ನವೋದಯ ಕಾಲದ ಹರಿಕಾರನಾಗಿದ್ದ ಡಾ. ವಿಂಚಿಯ ವರ್ಣಚಿತ್ರ ಇಡೀ ವಿಶ್ವವೇ ಬೆರಗುಗೊಳಿಸುವಂತಹ ದಾಖಲೆ ಮಟ್ಟದಲ್ಲಿ ಬಿಕರಿಯಾಗಿದೆ.

ಹೌದು, ಇದು ಎಷ್ಟು ಮೊತ್ತಕ್ಕೆ ಬಿಕರಿಯಾಗಿರಬಹುದು ೫೦೦, ಸಾವಿರ ಕೋಟಿ ರೂಪಾಯಿಗೆ ಮಾರಾಟವಾಗಿರಬಹುದೆ? ನಿಮ್ಮ ಕಲ್ಪನೆ ತಪ್ಪು. ೫೦೦ ವರ್ಷದಷ್ಟು ಹಳೆಯದಾದ ಈ ವರ್ಣಚಿತ್ರ ಬರೊಬ್ಬರಿ ೨,೯೨೦ ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ಇದುವರೆಗಿನ ಎಲ್ಲಾ ದಾಖಲೆಗಳನ್ನು ಮುರಿದುಹಾಕಿದೆ. ನ್ಯೂಯಾರ್ಕ್‌ನ ಕ್ರಿಸ್ಟಿ ಹರಾಜು ಮಳಿಗೆಯಲ್ಲಿ ಸಾಲ್ವಟಾರ್ ಆಫ್ ದ ವರ್ಲ್ಡ್ ಲ್ಯಾಟಿನ್ ಭಾಷೆಯಲ್ಲಿ ಸಾವಿಯರ್ ಆಫ್ ದ ವರ್ಲ್ಡ್ ಎಂದು ಅರ್ಥ. ೩೦ ವರ್ಣಚಿತ್ರಗಳಲ್ಲಿ ಲಿಯಾನಾರ್ಡೊ ರಚಿಸಿದ ಒಂದು ಕಲಾಕೃತಿಯನ್ನು ವ್ಯಕ್ತಿಯೊಬ್ಬರು ಇಷ್ಟೊಂದು ದುಬಾರಿ ಹಣ ತೆತ್ತು ಖರೀದಿಸಿದ್ದಾರೆ. ಆತನಿಗೆ ಆ ವರ್ಣ ಚಿತ್ರದ ಬಗ್ಗೆ ಇನ್ನೆಷ್ಟು ವ್ಯಾಮೋಹವಿರಬೇಕು.

ಪಟಿಲೊ ಪಿಕಾಸೊ ರಚಿಸಿದ್ದ ವುಮೆನ್ ಆಫ್ ಅಲ್ಜೇಱ್ಸ್ ಎಂಬ ವರ್ಣ ಚಿತ್ರ ೧೭೯ ದಶಲಕ್ಷ ಡಾಲರ್‌ಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ ಸೆಪ್ಟೆಂಬರ್ ೨೦೧೫ ರಲ್ಲಿ ವಿಲಿಯಂ ಡಿ ಕೂನಿಂಗ್ ರಚಿಸಿದ್ದ ಇಂಟರ್ ಚೇಂಜ್ ಪೇಂಟಿಂಗ್ ೩೦೦ ದಶಲಕ್ಷ ಡಾಲರ್‌ಗೆ ಬಿಕರಿಯಾಗಿ ಪಿಕಾಸೆ ದಾಖಲೆಯನ್ನು ಅಳಿಸಿ ಹಾಕಿತ್ತು. ಲಿಯಾನಾರ್ಡೊ ಡಾ ವಿಂಚಿಯರ ವರ್ಣಚಿತ್ರವನ್ನು ಹರಾಜು ಪ್ರಕ್ರಿಯೆ ಆರಂಭಿಸಿದ ೧೯ ನಿಮಿಷಗಳಲ್ಲಿ ಹರಾಜುದಾರರು ೭೫ ದಶಲಕ್ಷ ಡಾಲರ್‌ವರೆಗೂ ಖರೀದಿದಾರರು ಬಿಡ್ ಮಾಡಿದ್ದು ವಿಶೇಷವಾಗಿತ್ತು.

ನೋಡನೋಡುತ್ತಿದ್ದಂತೆ ಹರಾಜಿನಲ್ಲಿ ಪಾಲ್ಗೊಂಡವರು ೩೦೦ ದಶಲಕ್ಷ ಡಾಲರ್‌ವರೆಗೂ ಬಿಡ್ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮವನ್ನು ಮಂತ್ರಮುಗ್ಧರನ್ನಾಗಿಸಿತು. ಹರಾಜು ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಾಗ ೪೫೦.೩ ದಶಲಕ್ಷ ಡಾಲರ್‌ಗೆ ಬಿಡ್ ಮಾಡಿ ಈ ವರ್ಣಚಿತ್ರವನ್ನು ಖರೀದಿಸಿದರು. ಅಂದರೆ ಈ ಪೇಂಟಿಂಗ್ ಅನ್ನು ೨,೯೨೦ ಕೋಟಿ ರೂಪಾಯಿವರೆಗೂ ಬಿಡ್ ಮಾಡಿ ಹರಾಜಿನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಖರೀದಿಸಿದರು.

೨೬ ಅಡಿ ಎತ್ತರವಿರುವ ಈ ಪೇಂಟಿಂಗ್ ೧೫೦೦ಕ್ಕೂ ಹೆಚ್ಚು ಪ್ರದರ್ಶನಗೊಂಡಿದೆ. ನವೋದಯ ಶೈಲಿಯಲ್ಲಿರುವ ಈ ವರ್ಣಚಿತ್ರ ಬಲಗೈನಲ್ಲಿ ಆಶೀರ್ವಾದ ಮಾಡುತ್ತಿದ್ದರೆ, ಎಡಗೈನಲ್ಲಿ ಸ್ಫಟಿಕ ಹಿಡಿದುಕೊಂಡಿರುವ ರೀತಿಯಲ್ಲಿದೆ ಲಿಯಾನಾರ್ಡೊ ಡಾ ವಿಂಚಿ ರಚಿಸಿರುವ ಚಿತ್ರ. ಇವೆಲ್ಲಾ ಏನೇ ಇರಲಿ ದೂರವಾಣಿ ಮೂಲಕ ನಡೆದ ಅಂತಿಮ ಬಿಡ್‌ನಲ್ಲಿ ಕಲಾಪ್ರೇಮಿ ೨,೯೨೦ ಕೋಟಿ ರೂ. ವೆಚ್ಚಕ್ಕೆ ಖರೀದಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ.

Leave a Comment