ದಾಖಲೆಯ 600 ದಿನಕ್ಕೆ ಕಾಲಿಟ್ಟ ಮಹದಾಯಿ ಕಿಚ್ಚು

ನವಲಗುಂದದಲ್ಲಿ ರೈತರಿಂದ ಮತ್ತೆ ರಸ್ತೆ ತಡೆ
ನವಲಗುಂದ,ಮಾ.20- ಇಲ್ಲಿನ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ಮಹದಾಯಿ ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸೋಮವಾರ 600 ದಿನಕ್ಕೆ ಕಾಲಿಟ್ಟಿದ್ದು ಹುಬ್ಬಳ್ಳಿ ವಿಜಯಪೂರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ ಕಳೆದ 600 ದಿನಗಳಿಂದ ನೀರಿಗಾಗಿ ಹೋರಾಟ ನಡೆಸಿದರು ರಾಜ್ಯ ಮತ್ತು ಕೇಂದ್ರ ಸರಕಾರ ಸ್ಪಂದಿಸಿದೆ ರೈತನ್ನು ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ನಾಳೆ ವಿಧಾನ ಸೌಧ ಮುತ್ತಿಗೆ ಹಾಕುವದರೊಂದಿಗೆ ಬೆಂಗಳೂರಿನ ಬಿಜೆಪಿ ಕಚೇರಿಗೆ ಬೀಗ ಜಡಿಯಲು ನಿರ್ಧರಿಸಲಾಗಿದ್ದು. ಕೊಡಲೇ ರೈತರ ಸಮಸ್ಯೆಗೆ ಸ್ಪಂದಿಸದೇ ಹೋದರೇ ಇನ್ನೊಂದು ಬಂಡಾಯಕ್ಕೆ ನಾಂದಿ ಹಾಡಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ರೈತ ಕುಟುಂಬದಿಂದ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷರ ಪಾಲ್ಗೊಂಡು ಹೋರಾಟವನ್ನು ಯಸಶ್ವಿಗೊಳಿಸಬೇಕೆಂದು ಕರೆ ನೀಡಿದರು.
ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ಗೋವಾ ಚುಣಾವಣೆ ನಂತರ ಮಹದಾಯಿ ಸಮಸ್ಯೆಯನ್ನು ಇಥ್ಯಾರ್ತ ಪಡಿಸುವುದಾಗಿ ಬಿಜೆಪಿ ಸಂಸದರು ಭರವಸೆ ನೀಡಿದರು ಆದರೆ ಇನ್ನೂವರೆಗೂ ಯಾವದೇ ಕೆಲಸವನ್ನು ಆರಂಬಿಸದೇ ಇರುವುದರಿಂದ ರೈತರು ಆತಂಕ ಪಡುತ್ತಿದ್ದಾರೆ. ಹೀಗಾಗಿ ಉಭಯ ಸರಕಾಗಳು ರೈತರ ಕುರಿತು ಕಾಳಜಿ ವಹಿಸಿ ನಮ್ಮ ಹಕ್ಕಿನ ನೀರುನ್ನು ಮಲಪ್ರಭಾ ನದಿಗೆ ಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.
ಮಲ್ಲಿಕಾರ್ಜುನಗೌಡ ಪಾಟೀಲ, ರಮೇಶ ಹಲಗತ್ತಿ, ಬಸವರಾಜ ಬೀರಣ್ಣವರ, ಸಿದ್ದು ತೇಜಿ, ಸಂಗಪ್ಪ ನಿಡವಣಿ, ಫಕ್ಕಿರಪ್ಪ ಬ್ರೀಷ್ಟನವರ, ಡಿ.ಬಿ.ಕುರಹಟ್ಟಿ ಮತ್ತಿತ್ತರು ಇತ್ತರು.

Leave a Comment