ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಫೆಲ್ ನಡಾಲ್

ನವದೆಹಲಿ, ಅ ೨೦ – ಸ್ಪೇನ್ ಟೆನಿಸ್ ಸ್ಟಾರ್ ಆಟಗಾರ ರಾಫೆಲ್ ನಡಾಲ್ ಅವರು ೧೪ ವರ್ಷ ದೀರ್ಘ ಅವಧಿಯ ಗೆಳತಿ ಕ್ಸಿಸ್ಕಾ ಪೆರೆಲ್ಲೋ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಸ್ಪಾನಿಷ್ ಮಾಧ್ಯಮಗಳು ಸ್ಪಷ್ಟಪಡಿಸಿವೆ.
ಮಲೋರ್ಕಾನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೇವಲ ೩೫೦ ಅತಿಥಿಗಳ ಸಮ್ಮುಖದಲ್ಲಿ ೧೭ ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತ ನಡಾಲ್ ತನ್ನ ದೀರ್ಘ ಅವಧಿಯ ಪ್ರೇಯಸಿಯನ್ನು ವರಿಸಿದ್ದಾರೆ.
ಬ್ರಿಟಿಷ್ ಮೂಲದ ಕೋಟೆಯಲ್ಲಿ ರಾಫೆಲ್ ಹಾಗೂ ಪೆರೆಲ್ಲೋ ಅವರ ವಿವಾಹ ಕಾರ್ಯಕ್ರಮ ಜರುಗಿತು. ಪೆರೆಲ್ಲೋ ಅವರು ೩೩ರ ಪ್ರಾಯದ ನಡಾಲ್ ಅವರ ಕಿರಿಯ ಸಹೋದರಿ ಮರೆಬೆಲ್ ಸ್ನೇಹಿತೆ. ನಡಾಲ್ ಚಿಕ್ಕವಯಸ್ಸಿನಲ್ಲೇ ತನ್ನ ಕಿರಿಯ ಸಹೋದರಿ ಮೂಲಕ ಕ್ಸಿಸ್ಕಾ ಪೆರೆಲ್ಲೋ ಅವರ ಪರಿಚಯವಾಗಿತ್ತು.
ಕಳೆದ ಯುಎಸ್ ಓಪನ್ ಚಾಂಪಿಯನ್ ಆಗಿದ್ದ ನಡಾಲ್ ಅವರು ಗಾಯದಿಂದಾಗಿ ಇತ್ತೀಚೆಗೆ ಮುಕ್ತಾಯವಾಗಿದ್ದ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಿಂದ ವಿಥ್ ಡ್ರಾ ಮಾಡಿಕೊಂಡಿದ್ದರು. ಇದರೊಂದಿಗೆ ಎರಡನೇ ಬಾರಿ ನಡಾಲ್ ಶಾಂಘೈ ಮಾಸ್ಟರ್ಸ್ ಗೈರಾಗಿದ್ದಾರೆ.

Leave a Comment