ದಾಂಪತ್ಯ ಜೀವನಕ್ಕೆ ಅಡಿಯಿಟ್ಟ 65 ಜೋಡಿಗೆ ಶುಭಹಾರೈಸಿದ ಗಣ್ಯರು

ದಾವಣಗೆರೆ, ಜು. 12 – ನಗರದ ಶಿವಯೋಗಾಶ್ರಮದಲ್ಲಿಂದು ಜೆಡಿಎಸ್ ಮುಖಂಡರಾದ ಎಂ.ಆನಂದ್ ಅವರ ಜನ್ಮದಿನದ ಪ್ರಯುಕ್ತ ಸರ್ವಧರ್ಮೀಯ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಎಂ.ಆನಂದ್ ಫ್ರೆಂಡ್ಸ್ ಅಸೋಸಿಯೇಷನ್ ನಿಂದ ಹಮ್ಮಿಕೊಂಡಿದ್ದ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸುಮಾರು 65 ಜೋಡಿಗಳು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಇಂದು ಬೆಳಗ್ಗೆ 10-30 ರಿಂದ ಪ್ರಾರಂಭಗೊಂಡ ಈಮಂಗಳ ಕಾರ್ಯದಲ್ಲಿ ವಿವಿಧ ಮಠಾಧೀಶರು. ಹಿರಿಯ ಮುಖಂಡರು ಭಾಗವಹಿಸಿ ನೂತನ ದಂಪತಿಯನ್ನು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಎಂ.ಆನಂದಪ್ಪ ಹಾಗೂ ರೂಪಾ ಆನಂದಪ್ಪ ದಂಪತಿ ತಾಳಿ ಹಾಗೂ ವಸ್ತ್ರಗಳನ್ನು ನೀಡಿ ದಂಪತಿ ಸುಖಕರವಾಗಿ ಜೀವನ ನಡೆಸಲಿ ಎಂದು ಹಾರೈಸಿದರು. ಈ ವೇಳೆ ಎಂ.ಆನಂದ್ ಫ್ರೆಂಡ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಸಂಗನಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ಆನಂದ್ ಅವರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಹಲವಾರು ಜನಪರ ಕಾಳಜಿ ಹೊಂದಿ ದಾವಣಗೆರೆ ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ವಾರ್ಡ್ ಗಳಲ್ಲೂ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತ ನೀರು ಪೂರೈಕೆ,ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಹಾಗೂ ಹಲವಾರು ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ.ಅವರ ಕಾರ್ಯ ಶ್ಲಾಘನೀಯ ಎಂದರು.
ಈಸಂದರ್ಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಓಂಕಾರಶಿವಾರ್ಯ ಶ್ರೀ, ವಿರಕ್ತಮಠದ ಬಸವಪ್ರಭುಶ್ರೀ, ಹೆಬ್ಬಾಳು ವಿರಕ್ತ ಮಠದ ಮಹಾಂತರುದ್ರೇಶ್ವರ ಶ್ರೀ, ಕೆಂಗಾಪುರದ ರಾಮಲಿಂಗೇಶ್ವರ ಶ್ರೀ ಸಾನಿಧ್ಯ ವಹಿಸಿದ್ದರು. ಮೇಯರ್ ಶೋಭಾಪಲ್ಲಾಗಟ್ಟೆ, ಕೆ.ಬಿ.ಶಂಕರನಾರಾಯಣ್, , ಜೆ.ಅಮಾನುಲ್ಲಾಖಾನ್, ಹೆಚ್.ಕೆ.ರಾಮಚಂದ್ರಪ್ಪ ಹಾಗೂ ಅಭಿಮಾನಿ ಬಳಗದ ಸದಸ್ಯರು ಇದ್ದರು.

Leave a Comment