ದಸರೆಗೆ ಸೀತಾರಾಮ ಕಲ್ಯಾಣ

ಸೀತಾರಾಮ ಕಲ್ಯಾಣ’ದ ಟೀಸರ್ ನೊಡಿದರೆ ಇದು ತೆಲುಗು ಸಿನಿಮಾ ಅನ್ನಿಸಬಹುದು. ಅಷ್ಟರ ಮಟ್ಟಿಗೆ ಚಿತ್ರ ಮೂಡಿ ಬಂದಿದೆ. ಆದರೆ ಯಾವುದೇ ಚಿತ್ರದ ರಿಮೇಕ್ ಅಲ್ಲ ಅಪ್ಪಟ ಸ್ವಮೇಕ್ ಚಿತ್ರ. ಹೀಗಂತ ಹೇಳಿಕೊಂಡರು ನಟ ನಿಖಿಲ್ ಕುಮಾರ್. ಅದಕ್ಕೆ ಕಾರಣ ಸೀತಾರಾಮ ಕಲ್ಯಾಣ ಚಿತ್ರ ಮೂಡಿ ಬಂದಿರುವ ಪರಿ.ನಿರ್ದೇಶಕ ಎ. ಹರ್ಷ ಚಿತ್ರವನ್ನು ತೆಲುಗು ಸೇರಿದಂತೆ ಪರಭಾಷೆಯ ಚಿತ್ರಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವ ರೀತಿ ಚಿತ್ರೀಕರಿಸಿದ್ದಾರೆ. ರಾಮ್ ಲಕ್ಷಣ್ ಅವರ ಆಕ್ಷನ್ ಸನ್ನಿವೇಶಗಳು ತೆಲುಗು ಚಿತ್ರ ನೆನಪಿಸಿದರೆ ಆಶ್ಚರ್ಯವಿಲ್ಲ. ಟೀಸರ್ ನೊಡಿದ ಮಂದಿ ಇದು ತೆಲುಗು ಚಿತ್ರದ ರಿಮೇಕ್ ಇರಬೇಕು ಅನ್ನಿಸುವುದು ಸಹಜ. ಆದರೆ ರೀಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿದರು.
ಚಿತ್ರದಲ್ಲಿ ರವಿಶಂಕರ್, ಶರತ್ ಕುಮಾರ್,ಮಧುಬಾಲ,ಆದಿತ್ಯ ಮೆನನ್,ಸಾಧುಕೋಕಿಲ,ಚಿಕ್ಕಣ್ಣ,
ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ಅವರಿಂದ ಕಲಿತಿದ್ದೇನೆ.ಒಳ್ಳೆಯ ಚಿತ್ರ ನೀಡುವುದು ನಮ್ಮ ಉದ್ದೇಶ. ಹೀಗಾಗಿ ಇಡೀ ಚಿತ್ರತಂಡ ಶ್ರಮ ಹಾಕಿ ಕೆಲಸ ಮಾಡಿದೆ. ಚಿತ್ರೀಕರಣದ ಸೆಟ್‌ಗೆ ಬಂದರೆ ನಾನೊಬ್ಬ ನಟ.ನಿರ್ದೇಶಕರು ಹೇಳಿದಂತೆ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದರು. ಕರ್ನಾಟಕದ ವಿವಿದ ತಾಣಗಳಲ್ಲಿ ೯೯ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಇನ್ನು ೩೦ ದಿನ ಚಿತ್ರೀಕರಣ ಬಾಕಿ ಉಳಿದಿದೆ. ಆದಷ್ಟು ಶೀಘ್ರ ಚಿತ್ರೀಕರಣ ಮುಗಿಸಿ ತೆರೆಗೆ ತರಲಾಗುವುದು.ಹಾಡಿನ ಚಿತ್ರೀಕರಣಕ್ಕೆ ಎಲ್ಲಿ ಹೋಗಬೇಕೆನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೊಂಡರು.
ಕಳೆದವಾರ ಬೆಂಗಳೂರಿನ ಅರಮೆನೆ ಮೈದಾನದಲ್ಲಿ ’ಸೀತಾರಾಮ ಕಲ್ಯಾಣ’ ಚಿತ್ರದ ಕ್ಲೈಮಾಕ್ಸ್ ಸನ್ನಿವೇಶ ಚಿತ್ರೀಕರಿಸಿದ ತಂಡ ಅಲ್ಲಿ ಚಿತ್ರದ ಬಗ್ಗೆ ತಂಡ ಮಾಹಿತಿ ನೀಡಿತು.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ನಾನಿಲ್ಲಿ ಮುಖ್ಯಮಂತ್ರಿಯಾಗಿ ಬಂದಿಲ್ಲ.ನಿರ್ಮಾಪಕನಾಗಿ ಬಂದಿದ್ದೇನೆ. ಚಿತ್ರದ ಪ್ರತಿಯೊಂದು ಸನ್ನಿವೇಶ ನೋಡಿದ್ದೇನೆ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿಯೂ ಸಂಡೂರ್ ಎಪಿಸೋಡು ಅದ್ಬುತವಾಗಿ ಬಂದಿದೆ. ಕೆಲಸ ಒತ್ತಡದ ನಡುವೆಯೂ ಚಿತ್ರದ ಬಗ್ಗೆ ಮಾಹಿತಿ ಪಡೆಯುತ್ತಿರುತ್ತೇನೆ. ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಚೆನ್ನಾಗಿ ನಟಿಸಿದ್ಧಾರೆ ಬಗ್ಗೆ ಗುಣಗಾನ ಮಾಡಿದರು.
ನಿರ್ದೇಶಕ ಹರ್ಷ,ಕಾಮಿಡಿ,ಸೆಂಟಿಮೆಂಟ್ ಸೇರಿದಂತೆ ಪಕ್ಕಾ ಫ್ಯಾಮಿಲಿ ಅಂಶಗಳನ್ನು ಮುಂದಿಟ್ಟುಕೊಂಡು ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.ಎಲ್ಲಾ ಅಂದುಕೊಂಡಂತೆ ಆದರೆ ದಸರಾ ಹಾಜು ಬಾಜಿನಲ್ಲಿ ಸೀತಾರಾಮ ಕಲ್ಯಾಣ ಚಿತ್ರವನ್ನು ತೆರೆಯ ಮೇಲೆ ತರಲಾಗುವುದು.
ಯಾವುದೇ ಹಮ್ಮು ಬಿಮ್ಮಿನಲ್ಲದೆ ಕೆಲಸ ಮಾಡುತ್ತಾರೆ. ನಿಖಿಲ್ ಸಾರ್ ನಿರ್ದೇಶಕರ ನಟ. ತುಂಬಾ ಮೆಚೂರ್‍ಡ್ ಆಗಿ ನಟಿಸಿದ್ದಾರೆ.ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ.ಅವರೊಂದಿಗೆ ಮತ್ತೆ ಕೆಲಸ ಮಾಡಬೇಕು ಎನ್ನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಟೀಸರ್ ಬಿಡುಗಡೆಯಾದ ಬಳಿಕ ೬೦ ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ.ನಿರ್ಮಾಪಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗದಂತೆ ನೋಡಿಕೊಳ್ಳುತ್ತೇನೆ.ನಾಯಕಿ ರಚಿತಾ ರಾಮ್ ಪಾತ್ರ ನೋಡಿದ ಮಂದಿ ಇಂತಹ ಹುಡುಗಿ ನನಗೂ ಇರಬೇಕು ಅನ್ನಿಸಲಿದೆ ಎಂದರು. ಹಿರಿಯ ನಟ ಶರತ್ ಕುಮಾರ್, ಜಾಗ್ವಾರ್ ಚಿತ್ರದಲ್ಲಿ ಕೆಲಸ ಮಾಡಬೇಕಾಗುತ್ತು ಅದು ಸಾಧ್ಯವಾಗಲಿಲ್ಲ. ಈಗ ಎರಡನೇ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.ಚಿತ್ರದಲ್ಲಿ ಫ್ಯಾಮಿಲಿ ಎಮೋಷನ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಳ್ಳೆಯ ಚಿತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟಿ ರಚಿತಾ ರಾಮ್, ಹಿರಿಯ ಕಲಾವಿದರಾದ ಗಿರಿಜಾ ಲೋಕೇಶ್,ರವಿಶಂಕರ್, ಮಧುಬಾಲ,ಆದಿತ್ಯ ಮೆನನ್ ಸೇರಿದಂತೆ ಹಲವು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

Leave a Comment