ದಸರಾ ನಡೆದ ನಂತರ ಮೇಯರ್ ಅವಧಿ ಮುಕ್ತಾಯ : ‌

ಯಾರಾಗಲಿದ್ದಾರೆ ಮೇಯರ್?
ಮೈಸೂರು. ಆ.23: ಈ ಬಾರಿಯ ದಸರಾ ನಡೆದ ಒಂದು ತಿಂಗಳ ಅವಧಿಯಲ್ಲೇ ಮೇಯರ್ ಅಧಿಕಾರ ಅವಧಿ ಮುಕ್ತಾಯವಾಗಲಿದೆ.
ಪುಷ್ಪಲತಾ ಜಗನ್ನಾಥ್ ಅವರಿಗೆ ಮೇಯರ್ ಅವಧಿಯಲ್ಲಿನ ಕೊನೆಯ ದಸರಾ ಇದಾಗಲಿದ್ದು, ಒಂದು ವರ್ಷದ ಅವಧಿ ಮುಗಿದ ಹಿನ್ನೆಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಮೇಯರ್ ಬದಲಾಗಲಿದ್ದಾರೆ. 2019 ರ ಈ ಬಾರಿಯ ದಸರಾದಲ್ಲಿ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಅಂಬಾರಿಗೆ ಮೇಯರ್ ಪುಷ್ಪಲತಾ ಜಗನ್ನಾಥ್ ಪುಷ್ಪಾರ್ಚನೆ ಮಾಡಲಿದ್ದಾರೆ. ಕಳೆದ ವರ್ಷ ಆಗ ತಾನೇ ಪಾಲಿಕೆ ಚುನಾವಣೆ ನಡೆದಿತ್ತು ಆದರೆ ಮೇಯರ್ ಆಯ್ಕೆ ನಡೆಯದೇ ಇದ್ದ ಕಾರಣ ಪಾಲಿಕೆಯಲ್ಲಿ ಮೇಯರ್ ಇಲ್ಲದ ದಸರಾ ನಡೆದಿತ್ತು. ನವೆಂಬರ್ 18ರ ಒಳಗೆ ಅಧಿಕಾರಾವಧಿ ಮುಕ್ತಾಯವಾಗಲಿದೆ.
ಈಗಾಗಲೇ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡೆಸಿದ್ದು, ಮಾತುಕತೆಯಂತೆ ಮೊದಲ ಅವಧಿಗೆ ಕಾಂಗ್ರೆಸ್ ಗೆ ಅಧಿಕಾರ ನೀಡಲಾಗಿತ್ತು, ಇದೀಗ ಜೆಡಿಎಸ್ ನ ಸರದಿ ಬಂದಿದ್ದು, ಜೆಡಿಎಸ್ ನಿಂದ ಯಾವ ಸದಸ್ಯರು ಮೇಯರ್ ಆಗ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಮೈಸೂರು ಮಹಾನಗರ ಪಾಲಿಕೆಯಲ್ಲಿಯೂ ಹೆಚ್ಚು ಸದಸ್ಯರ ಸಂಖ್ಯಾಬಲ ಇರುವ ಕಾರಣ ಸ್ವಲ್ಪ ವರ್ಕ್ ಔಟ್ ಮಾಡಿ ಅಧಿಕಾರ ತಮ್ಮದಾಗಿಸಿಕೊಂಡರೂ ಆಶ್ಚರ್ಯವೇನಿಲ್ಲ.

Leave a Comment