ದಸಂಸ  ಪತ್ರಿಭಟನೆ 23 ರಂದು

ಕಲಬುರಗಿ ಆ 17: ನವದೆಹಲಿಯ ಜಂತರ್‍ಮಂತರ್‍ನಲ್ಲಿ ಕಳೆದ 10 ರಂದು ಸಂವಿಧಾನ ಪ್ರತಿ ಸುಟ್ಟ ಘಟನೆ ಖಂಡಿಸಿ ಕರ್ನಾಟಕರಾಜ್ಯ ದಲಿತಸಂಘರ್ಷ ಸಮಿತಿಯು ಆ.23 ರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ.

ಸಂವಿಧಾನ ಗ್ರಂಥಕ್ಕೆ ಬೆಂಕಿ ಹಚ್ಚಿದ್ದು ಖಂಡನೀಯ. ಕೃತ್ಯ ಎಸಗಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಲಾಗುವದು ಎಂದು ಸಮಿತಿ ರಾಜ್ಯ ಸಂಚಾಲಕ ಡಾ ಡಿ.ಜಿ ಸಾಗರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನದ ರಕ್ಷಣೆ,ಸಂವಿಧಾನದ ಪರವಾಗಿ ಮಾತನಾಡುವದು, ಸಂವಿಧಾನಕ್ಕೆಅಪಚಾರವಾದಾಗ ಪ್ರತಿಭಟಿಸುವದು ಕೇವಲ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಕರ್ತವ್ಯ ಮಾತ್ರವಲ್ಲ.ದೇಶವನ್ನು ಪ್ರೀತಿಸುವ ಗೌರವಿಸುವ ಎಲ್ಲರ ಆದ್ಯಕರ್ತವ್ಯವಾಗಿದೆ.ಇದನ್ನು ಸಂವಿಧಾನದ ಭಾಗ 4(ಎ) ಅನುಚ್ಛೇದ 51 (ಎ)ದಲ್ಲಿ ಹೇಳಲಾಗಿದೆ

ಆ 25 ರಂದು ನಗರದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ  ಸಂವಿಧಾನ ರಕ್ಷಿಸಿ ಕಾರ್ಯಕ್ರಮ ಆಯೋಜಿಸಲಾಗುವದು ಎಂದರು..

Leave a Comment