ದಲಿತ ವ್ಯಕ್ತಿ ಮೇಲೆ ಹಲ್ಲೆ ಖಂಡನೀಯ

ರಾಯಚೂರು.ಜೂ.13- ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಕಲ್ ಖಂಡಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿಯ ಪ್ರತಾಪ ಮೈಸೂರಿಗೆ ತೆರಳಿ ಐ‌ಎ‌ಎಸ್ ಪರೀಕ್ಷೆ ಬರೆದು ಸ್ಕೂಟರ್‌ನಿಂದ ಹಿಂತಿರುಗುವಾಗ ರಾತ್ರಿ ದುಷ್ಕರ್ಮಿಗಳನ್ನು ತಡೆದು ಚಿನ್ನದ ಸರ, ಮೊಬೈಲ್ ಕಸಿದುಕೊಂಡು ದೌರ್ಜನ್ಯ ವೆಸಗಿದ್ದರು. ಶನಿ ದೇವರ ದೇವಸ್ಥಾನದಲ್ಲಿ ಮಲಗಿದ್ದ ದೇವಸ್ಥಾನದ ಆರ್ಚಕ ಶಿವಪ್ಪ ಅವನ ಜಾತಿ ತಿಳಿದುಕೊಂಡು ಏಳು ಜನರನ್ನು ಕರೆಸಿಕೊಂಡು ಮಾರಣಾಂತಿಕ ಹಲ್ಲೆ ಮಾಡಿ, ವಿವಸ್ತ್ರಗೊಳಿಸಿದರೆಂದು ಆರೋಪಿಸಿದರು.
ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಮುಂದಾಗಬೇಕು. ರಾಜ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಸರ್ಕಾರವೂ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟವರ ವಿರುದ್ಧ ಪೊಲೀಸರು ಸೂಕ್ತವಾದ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ, ನಲ್ಲಾರೆಡ್ಡಿ, ಬಸವರಾಜ ಬೊಮ್ಮನಾಳ, ತಿಮ್ಮಪ್ಪ, ಉಪಸ್ಥಿತರಿದ್ದರು.

Leave a Comment