ದಲಿತ ವೈದ್ಯ ವಿದ್ಯಾರ್ಥಿ ಕೊಲೆ

ಮುಜಾಫರ್‌ನಗರ,ಸೆ.೧೧-ಇಲ್ಲಿನ ಮಂಡ್ಲಾ ಗ್ರಾಮದಲ್ಲಿ ಅಪರಿಚಿತ ಆಕ್ರಮಣಕಾರರು ದಲಿತ ವೈದ್ಯಕೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯಗೈದ ಘಟನೆ ನಡೆದಿದೆ.

ಎರಡನೇ ವರ್ಷದ ವೈದ್ಯ ವಿದ್ಯಾರ್ಥಿ ರಜತ್ ಕಾಲೇಜಿನಿಂದ ತನ್ನ ಮನೆಗೆ ಮರಳುವ ಮಾರ್ಗ ಮಧ್ಯೆ ಕಿಡಿಗೇಡಿಗಳು ದುಷ್ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಿಜ್ವಾನ್ ಅಹಮದ್ ತಿಳಿಸಿದ್ದಾರೆ.
ರಜತ್ ಕೊಲೆ ಖಂಡಿಸಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕುಟುಂಬ ಸದಸ್ಯರು ಹೆದ್ದಾರಿಯಲ್ಲಿ ರಜತ್ ಮೃತದೇಹವಿಟ್ಟು ಪ್ರತಿಭಟನೆ ನಡೆಸಿ, ಕೂಡಲೇ ಕೊಲೆಗಾರರನ್ನು ಬಂಧಿಸುವಂತೆ ಆಗ್ರಹಿಸಿದರು.
ಕುಟುಂಬ ಸದಸ್ಯರನ್ನು ಸಂತೈಸಿದ ಪೊಲೀಸರು ನಂತರ ರಜತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment