ದಲಿತರ ಬದುಕು ಕಥಾನಕವೆಂದು ಗುರುತಿಸಲ್ಪಟ್ಟ ಕೃತಿ “ಅನ್ನ”

ಚಾಮರಾಜನಗರ. ಸೆ.14- ಬಡವರ, ನೊಂದವರ ,ಹಸಿದವರ, ದಲಿತರ ಬದುಕಿನ ಹೋರಾಟದ ಕಥಾನಕವಾಗಿ ಶ್ರೀ ಹನೂರು ಚನ್ನಪ್ಪ ರವರ “ಅನ್ನ” ಕಥಾ ಸಂಕಲನವು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದೆ ಎಂದು ಪತ್ರಕರ್ತ, ಲೇಖಕ ಮಂಜುನಾಥಲತಾ ಅಭಿಪ್ರಾಯಪಟ್ಟರು.
ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಸಾಪ್ತಾಹಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಹನೂರು ಚನ್ನಪ್ಪರವರ ಅನ್ನ ಕೃತಿ ಕುರಿತು ಮಾತನಾಡಿದರು. ಅನ್ನ ಸಂಕಲನದಲ್ಲಿಸ ಬರುವ ಜೀತ, ಅನ್ನ, ಕಾವಲು, ಹೊಲ ಶೀರ್ಷಿಕೆಗಳಿರುವ ಕಥೆಗಳಲ್ಲಿ ಜೀತ ಮುಕ್ತಿಗಾಗಿ ಹೋರಾಟ ಅನ್ನಕ್ಕಾಗಿ ಹಪಹಪಿಸುವಿಕೆ, ಹೋರಾಟ ದಿಂದ ಬ್ರಿಟಿಷರಿಂದ ಹೊಲವನ್ನು ಪಡೆಯುವುದು ಹೀಗೆ ಅನೇಕ ವಿಷಯಗಳು ಈ ಅನ್ನ ಕಥಾ ಸಂಕಲನದಲ್ಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ ಸಾಪ್ತಾಹಿಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ರಂಗಗೀತೆ, ಸೋಬಾನೆಪದ ಮುಂತಾದವುಗಳನ್ನು ಪ್ರದರ್ಶೀಸಲು ಅವಕಾಶ ನೀಡಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ವಿನಯ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಲೇಖಕರು, ಸಾಹಿತಿಗಳೂ ಇದ್ದಾರೆ ಅವರೆಲ್ಲರ ಕೃತಿಗಳು ಈ ಕಾರ್ಯಕ್ರಮದಲ್ಲಿ ಪರಿಚಯಸಲ್ಪೆಬೇಕು, ಎನ್ನುವುದು ಈ ಸಾಪ್ತಾಹಿಕ ಸಾಹಿತ್ಯ ಸಂಭ್ರಮಸದ ಮೂಲ ಉದ್ದೇಶ ಎಂದರು.
ವಕೀಲ ಎಂ.ಶಿವರಾಮು ಸ್ವರಚಿತ ಕವನ ವಾಚಿಸಿದರು. ಗಮಕಿ ವೀರಶೆಟ್ಟಿ ವಚನಗಾಯನ ಮಾಡಿದರು. ಜಿಲ್ಲಾ ಕಸಾಪ ಗೌ|| ಕಾರ್ಯದರ್ಶಿ ಜಿ.ರಾಜಪ್ಪ, ಗೌ|| ಕೋಶಾಧ್ಯಕ್ಷ ಎಸ್.ನಿರಂಜನಕುಮಾರ್, ಕೃಷ್ಣಸ್ವಾಮಿನಾಯಕ, ಎಸ್.ಪರಶಿವಮೂರ್ತಿ, ಮಲ್ಲಿಕಾರ್ಜುನ, ನವಮಿಬಂಡಿಗೆರೆ, ಕೊತ್ತಲವಾಡಿ ಮಹದೇವಸ್ವಾಮಿಸ, ಸಿದ್ದಮಲ್ಲಪ್ಪ, ರಾಧಗುರುರಾಜು, ಪ್ರಭುಸ್ವಾಮಿಆಲೂರು, ನಾಗೇಂದ್ರ, ನಾಗನಂದನ, ಬಸವನಾಯಕ, ಸುರೇಶ್‍ರಾಮಸಮುದ್ರ, ಕುಮಾರದೊಡ್ಡರಾಯಪೇಟೆ, ಪುಟ್ಟಸ್ವಾಮಿಸ, ವೆಂಕಟಮಾದೇಗೌಡ, ಇನ್ನುಸ ಮುಂತಾದವರುಸ ಉಪಸ್ಥಿತರಿದ್ದರು.

Leave a Comment