ದರ್ಶನ್ ಚಾಲೆಂಜ್ ಹಾಕಿದ್ದು ಯಾರಿಗೆ?

 

 

ಬೆಂಗಳೂರು, ಜು – ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆಯ ಪಾಸ್ ನಲ್ಲಿ  ದಚ್ಚು ಭಾವಚಿತ್ರ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳನ್ನು ಸಮಾಧಾನ ಗೊಳಿಸಿ ಟ್ವೀಟ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್, ಇಂದು ಫೇಸ್ ಬುಕ್ ಲೈವ್ ನಲ್ಲಿ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಹಾಕ್ತಿನಿ ಎಂದಿದ್ದರು.

ಯಾರಿಗೆ ದಚ್ಚು ಸವಾಲು?  ಎನ್ ವಿಷಯ ಎಂದು ಕಾದು ಕುಳಿತಿದ್ದವರಿಗೆ ದಾಸ ಹೇಳಿದ್ದೇನು ಗೊತ್ತಾ?

“ಅಭಿಮಾನಿಗಳೇ ನಮಗೆ ಸೆಲೆಬ್ರಿಟಿ.  ಹೀಗಾಗಿ ನೆಚ್ಚಿನ ನಟರ ವಿಷಯದಲ್ಲಿ ಕಚ್ಚಾಟ ಬೇಡ.  ಕುರುಕ್ಷೇತ್ರ ಬಿಗ್ ಬಜೆಟ್ ಚಿತ್ರ.  ಮುನಿರತ್ನ ಬಹಳ ಕಷ್ಟಪಟ್ಟು, ಬಹು ತಾರಾಗಣದ ಸಿನೆಮಾ ಮಾಡಿದ್ದಾರೆ.  ಹೀಗಾಗಿ ಪಾಸ್ ಪಡೆದವರೆಲ್ಲ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿ”ಎಂಬರ್ಥದ ಮಾತುಗಳನ್ನಾಡಿದ್ದಾರೆ.

ಅಂತೂ, ತೀವ್ರ ಕುತೂಹಲ ಮೂಡಿಸಿದ್ದ ದರ್ಶನ್ ಅಭಿಮಾನಿಗಳನ್ನೇ ಸೆಲೆಬ್ರಿಟಿಯನ್ನಾಗಿಸಿ ಅವರಿಗೇ ಸವಾಲು ಹಾಕಿದ್ದಾರೆ.

Leave a Comment