ದರ್ಗಾ ಮಸೀದಿಗೆ ಸೇರಿದ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಡೆಮಾಲಿಸ್ ಗೆ ಆದೇಶ

ಹೊಸಪೇಟೆ.ಫೆ.೧೯. ನಗರದ ದರ್ಗಾ ಮಸೀದಿಗೆ ಸೇರಿದ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಡೆಮಾಲಿಸ್ ಗೆ ಹೊಸಪೇಟೆ ನಗರಸಭೆ ಆದೇಶ ಮಾಡಿದೆ.

ಇಂದು ಸಂಜೆಯೊಳಗೆ ಸ್ವಯಂ ಪ್ರೇರಿತರಾಗಿ ಮಳಿಗೆ ತೆರವುಗೊಳಿಸದಿದ್ದರೆ ಜೆ.ಸಿ.ಬಿ.ಮೂಲಕ ಡೆಮಾಲಿಸ್ ಮಾಡುವುದಾಗಿ ನಗರಸಭೆ ಎಚ್ಚರಿಕೆ ನೀಡಿದೆ.

ಸುಪ್ರೀಂಕೋರ್ಟ್ ಆದೇಶದನ್ವಯ ರಸ್ತೆ ಒತ್ತುವರಿಯಾಗಿರುವ ಕಟ್ಟಡಗಳನ್ನ ತೆರವುಗೊಳಿಸುತ್ತಿರುವುದಾಗಿ ನಗರಸಭೆ ಹೇಳಿಕೊಂಡಿದೆ.

ನಗರಸಭೆ ನೂಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಸ್ವಯಂ ಪ್ರೇರಿತರಾಗಿ ತರಾತುರಿಯಲ್ಲಿ ಮಳಿಗೆ ತೆರವುಗೊಳಿಸುತ್ತಿದ್ದಾರೆ.

ನಗರಸಭೆಯ ತರಾತುರಿ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿರುವ ಮಸೀದಿ ಆಡಳಿತ ಮಂಡಳಿ, ಕನಿಷ್ಠ ಒಂದು ವಾರ ಕಾಲಾವಕಾಶ ನೀಡಿದರೆ ಇಲ್ಲಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತಿತ್ತು ಎಂದು ಹೇಳಿದೆ.

ದರ್ಗಾ ಹಾಗೂ ಮಸೀದಿ ವಕ್ಫ್ ಬೋರ್ಡ್ ಗೆ ಸಂಭಂದಿಸಿದೆ. ಆದರೆ ರಾಜಕೀಯ ದುರುದ್ದೇಶದಿಂದ ಈ ರೀತಿಯಾಗಿ ಮಸೀದಿಯನ್ನ ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.

Leave a Comment