ದರೋಡೆಗೆ ಸಂಚು ರೌಡಿಗಳ ಸೆರೆ

ಬೆಂಗಳೂರು, ಸೆ ೨೧- ದರೋಡೆಗೆ ಸಂಚು ರೂಪಿಸಿದ್ದ ಇಬ್ಬರು ರೌಡಿಗಳು ಸೇರಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಚಂದ್ರಲೇಔಟ್ ನ ಅರುದಂತಿ ನಗರದ ಶಕ್ತಿ ಪ್ರಸಾದ್ ಆಲಿಯಾಸ್ ಶಕ್ತಿ (30) ಭೈರವೇಶ್ವರ ನಗರದ ಮಣಿಕಂಠ ಆಲಿಯಾಸ್ ಮಣಿ (26) ಲಗ್ಗೆರೆಯ ಚೌಡೇಶ್ವರಿ ನಗರದ ರವಿ (24) ಹಾಗೂ ರಾಘವೇಂದ್ರ (20) ಬಂಧಿತ ಆರೋಪಿಯಾಗಿದ್ದಾರೆ.
ಬಂಧಿತರಿಂದ ಮಚ್ಚು, ಲಾಂಗು, ಚಾಕು, ಖಾರದ ಪುಡಿ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ,.
ಬಂಧಿತ ಶಕ್ತಿ ಪ್ರಸಾದ್ ಚಂದ್ರಲೇಔಟ್ ಹಾಗೂ ಜ್ಞಾನ ಭಾರತಿ, 2 ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿದ್ದಾನೆ. ಈತನ ಮೇಲೆ ಒಂದು ಕೊಲೆ ಯತ್ನ ಸೇರಿ 12 ಪ್ರಕರಣಗಳು ದಾಖಲಾಗಿದ್ದರೆ ಮಣಿ, ವಿಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು ಈತನ ವಿರುದ್ಧ ಕೊಲೆ ಯತ್ನ ಸೇರಿದಂತೆ 6 ಪ್ರಕರಣಗಳು ದಾಖಲಾಗಿವೆ.
ಇವರಿಬ್ಬರೂ ರೌಡಿಗಳು ಬಂಧಿತ ಇನ್ನಿಬ್ಬರ ಜೊತೆ ಸೇರಿ ಹೆಗ್ಗನಹಳ್ಳಿಯ ಶ್ರೀಗಂಧ ನಗರ ಮುಖ್ಯರಸ್ತೆಯಲ್ಲಿ ಸೇರಿ ದರೋಡೆಗೆ ಸಂಚು ರೂಪಿಸಿದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Comment