ದಬಾಂಗ್ ೩’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳಿವೆ: ಹಿಂದೂ ಜನಜಾಗೃತಿ ಸಮಿತಿ

ಪುಣೆ, ನ ೨೭ – ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿರುವ ’ದಬಾಂಗ್ ೩’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿತಗೆ ಧಕ್ಕೆಯಾಗುವ ಅಂಶಗಳಿವೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ಈ ಸಂಬಂಧ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಪ್ರಾತಿನಿಧ್ಯವನ್ನು ಸಲ್ಲಿಸಿರುವ ಸಮಿತಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದೃಶ್ಯಗಳನ್ನು ಅಳಿಸಬೇಕು ಮತ್ತು ಅಲ್ಲಿಯವರೆಗೆ ಚಿತ್ರಕ್ಕೆ ಯಾವುದೇ ಪ್ರಮಾಣೀಕರಣವನ್ನು ನೀಡಬಾರದು ಎಂದು ಒತ್ತಾಯಿಸಿದೆ.

ಯುಎನ್‌ಐ ಜೊತೆ ಮಾತನಾಡಿದ ಸಮಿತಿ (ಮಹಾರಾಷ್ಟ್ರ ಮತ್ತು ಜಾರ್ಖಂಡ್) ರಾಜ್ಯ ಸಂಘಟಕ ಸುನೀಲ್ ಘನ್ವತ್, “ಸಲ್ಮಾನ್ ಖಾನ್ ಫಿಲ್ಮ್ಸ್ ನಿರ್ಮಿಸಿದ ದಬಾಂಗ್ ೩ ಚಿತ್ರದ ಟ್ರೈಲರ್ ಇತ್ತೀಚೆಗೆ ಪ್ರಸಾರವಾಗಿದೆ ‘ಹಡ್-ಹುಡ್-ದಬಾಂಗ್-ದಬಾಂಗ್ ಹಾಡಿನಲ್ಲಿ ’, ಹಿಂದೂ ಋಷಿಮುನಿಗಳು ಮತ್ತು ಭಗವಾನ್ ಶಿವ, ಶ್ರೀರಾಮ ಮತ್ತು ಶ್ರೀ ಕೃಷ್ಣರನ್ನು ಅಪಮಾನಿಸಲಾಗಿದೆ.

“ಸಾಧುಗಳು ಸಲ್ಮಾನ್ ಖಾನ್ ಅವರೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ನೃತ್ಯ ಮಾಡುತ್ತಿರುವುದನ್ನು ತೋರಿಸಲಾಗಿದೆ. ಇದು ಎಲ್ಲಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಋಷಿಮುನಿಗಳ ನೃತ್ಯ ಮತ್ತು ದೇವತೆಗಳನ್ನು ಮಾನವರಂತೆ ಚಿತ್ರಿಸುವ ದೃಶ್ಯಗಳು ಹಿಂದೂ ಋಷಿಮುನಿಗಳು ಮತ್ತು ದೇವತೆಗಳಿಗೆ ಅವಮಾನಕರವಾದವು “ಎಂದು ಅವರು ಹೇಳಿದ್ದಾರೆ.

Leave a Comment