ದಜವೇ ವಾರ್ಷಿಕೋತ್ಸವ 13 ರಂದು

 

ಕಲಬುರಗಿ ಫೆ 11: ದಲಿತ ಜನಜಾಗೃತಿ ವೇದಿಕೆ ಮೂರನೆಯ ವಾರ್ಷಿಕೋತ್ಸವ ಫೆ. 13 ರಂದು ಬೆಳಿಗ್ಗೆ 11 ಗಂಟೆಗೆ ಡಾ ಎಸ್ ಎಂ ಪಂಡಿತರಂಗಮಂದಿರದಲ್ಲಿ ನಡೆಯಲಿದೆ.ಬಿಗ್‍ಬಾಸ್ ಸ್ಪರ್ಧಿ ಸೋನುಪಾಟೀಲ ಕಾರ್ಯಕ್ರಮಕ್ಕೆ ಆಗಮಿಸಲಿದ್ದು,ಕರಾಟೆ ಚಾಂಪಿಯನ್ ಮಾಲಾಶ್ರೀ ಆರ್ ಎಚ್‍ರನ್ನು  ಈಸಂದರ್ಭದಲ್ಲಿ ಸನ್ಮಾನಿಸಲಾಗುವದು ಎಂದು ವೇದಿಕೆ ರಾಜ್ಯಾಧ್ಯಕ್ಷ ರಾಜಕುಮಾರ ಹುಗ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮೀಣಶಾಸಕ ಬಸವರಾಜ ಮತ್ತಿಮೂಡ ಕಾರ್ಯಕ್ರಮಉದ್ಘಾಟಿಸಲಿದ್ದು ಶಾಸಕರಾದ ಡಾ.ಉಮೇಶಜಾಧವ, ಡಾ ಅಜಯಸಿಂಗ್, ಖನಿಜ ಫಾತಿಮಾ. ವಿಠ್ಠಲ ದೊಡ್ಮನಿ  ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು .ಮೈಸೂರು ಉರಿಲಿಂಗಪೆದ್ದಿ ಸಂಸ್ಥಾನಮಠದಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿದಿಗಂಬರ ಬಬಲಾದ,ಶಿವಾಬೇಲೂರ,ಯಲ್ಲಾಲಿಂಗ ಖನ್ನಾ,ಅಂಬಾರಾಯ ಶಿಲ್ಡ ಸೇರಿದಂತೆಹಲವರಿದ್ದರು

Leave a Comment